ಆಂಧ್ರ : ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಇಂದು ವಿಜಯವಾಡದ ಪ್ರಕಾಶಂ ಬ್ಯಾರೇಜ್‌ನಿಂದ ಶ್ರೀಶೈಲಂವರೆಗೆ ಸೀಪ್ಲೇನ್ ಡೆಮೊ ಫ್ಲೈಟ್ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.ಸೀಪ್ಲೇನ್ ಒಂದು ಸ್ಥಿರ ರೆಕ್ಕೆಯ ವಿಮಾನವಾಗಿದ್ದು, ನೀರಿನ ಮೇಲೆ ಟೇಕಾಫ್ ಮತ್ತು ಲ್ಯಾಂಡಿಂಗ್ ಆಗುವ ಸಾಮರ್ಥ್ಯವನ್ನು ಹೊಂದಿರುತ್ತದೆ.
#WATCH | Andhra Pradesh CM N Chandrababu Naidu, Rammohan Naidu, Minister of Civil Aviation board a seaplane as the trial run of seaplane service from Vijayawada to Srisailam in NTR District begins today pic.twitter.com/RBwh6GG2NY
— ANI (@ANI) November 9, 2024
ಸೀ ಪ್ಲೇನ್ ಯೋಜನೆ ಬಗ್ಗೆ ಮಾತನಾಡಿದ ಚಂದ್ರಬಾಬು ನಾಯ್ಡು, ದಕ್ಷಿಣ ಭಾರತದ ರಾಜ್ಯದಲ್ಲಿ ಸೀಪ್ಲೇನ್ ಕಾರ್ಯಾಚರಣೆಯನ್ನು ಉತ್ತೇಜಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ.ಇದೊಂದು ಹೊಸ ಪ್ರಯೋಗವಾಗಿದ್ದು ನನಗೆ ತುಂಬಾ ಸಂತೋಷವಾಗಿದೆ. ದೇಶದಲ್ಲಿ ಹೊಸದೇನಾದರೂ ನಡೆದರೆ ಅದು ಅಮರಾವತಿಯಲ್ಲಿ ಆಗಬೇಕು ಎಂದಿದ್ದಾರೆ.
ಆಂಧ್ರ ಸರ್ಕಾರ ಈ ಸೀ ಪ್ಲೇನ್ ಯೋಜನೆ ಮೂಲಕ ಅಮರಾವತಿಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಕ್ಷೇತ್ರಕ್ಕೆ ಉದ್ಯೋಗಾವಕಾಶವನ್ನು ಹೆಚ್ಚು ಮಾಡುವ ಗುರಿ ಹೊಂದಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.