ಧಾರವಾಡ : ಶಿವಮೊಗ್ಗ, ಸಾಗರ ಮತ್ತು ಬೀದರ್ ಬಳಿಕ ಈಗ ಧಾರವಾಡದಲ್ಲಿಯೂ ಸಿಇಟಿ ವಿದ್ಯಾರ್ಥಿಯ ಜನಿವಾರಕ್ಕೆ ಪರೀಕ್ಷಾಧಿಕಾರಿಗಳು ಕತ್ತರಿ ಹಾಕಿರುವ ಪ್ರಕರಣ ನಿಧಾನವಾಗಿ ಬೆಳಕಿಗೆ ಬಂದಿದೆ. ಹುರಕಡ್ಲಿ ಕಾಲೇಜಿನ ವಿದ್ಯಾರ್ಥಿ ನಂದನ್ ಏರಿ ,ಈ ಬಗ್ಗೆ ದೂರು ದಾಖಲಿಸಿದ್ದು ನಾನೇ ಜನಿವಾರ ತೆಗೆಯುತ್ತೇನೆಂದರೂ ಬಿಡದೆ ಪರೀಕ್ಷಾಧಿಕಾರಿಗಳು ಬಲವಂತವಾಗಿ ಕತ್ತಿಸಿದ್ದಾರೆ ಎಂದು ದೂರಿದ್ದಾನೆ.
ಏ. 16 ರಂದು ಈ ಘಟನೆ ನಡೆದಿದ್ದು, ಜನಿವಾರ ಕತ್ತರಿಸಿದ ಬಳಿಕ ಅದನ್ನು ಕೈಗೆ ಕೊಟ್ಟು ಬಳಿಕ ಪರೀಕ್ಷೆಯುವಂತೆ ಹೇಳಿದರು ಎಂದು ನಂದನ್ ದೂರಿದ್ದಾನೆ.
ಭೀತಿಗೊಂಡ ನಂದನ್ ಈ ಸಂಗತಿಯನ್ನು ಮನೆಯವರು ಮತ್ತು ಸ್ನೇಹಿತರಿಂದ ಮುಚ್ಚಿಟ್ಟಿದ್ದು ಈಗ ವಿವಾದವೆದ್ದ ಬಳಿಕ ಮನೆಯವರ ಬಳಿ ಹಂಚಿಕೊಂಡಿದ್ದಾನೆ. ಪರೀಕ್ಷಾ ಸಿಬ್ಬಂದಿಗಳ ಅಚಾತುರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.