ನವದೆಹಲಿ : ಓಲಾ ಮತ್ತು ಊಬರ್‌ನಂತಹ ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆಗಳ ಮಾದರಿಯಲ್ಲಿ ಕೇಂದ್ರ ಸರ್ಕಾರ ಸಹಕಾರ್ ಟ್ಯಾಕ್ಸಿ ಸೇವೆ ಆರಂಭಿಸಲು ಚಿಂತಿಸಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಈ ವಿಚಾರವನ್ನು ಘೋಷಿಸಿದ್ದು, ಚಾಲಕರಿಗೆ ನೇರವಾಗಿ ಪ್ರಯೋಜನವಾಗುವಂತೆ ವಿನ್ಯಾಸಗೊಳಿಸಲಾದ ಸಹಕಾರಿ ಆಧಾರಿತ ಸೇವೆಯಾದ ‘ಸಹಕಾರ್ ಟ್ಯಾಕ್ಸಿ’ ಸೇವೆಯನ್ನು ಸರ್ಕಾರ ಪರಿಚಯಿಸಲಿದೆ ಎಂದರು.
ಲೋಕಸಭೆಯಲ್ಲಿ ಮಾತನಾಡಿದ ಶಾ, ಈ ಉಪಕ್ರಮವು ಪ್ರಧಾನಿ ನರೇಂದ್ರ ಮೋದಿಯವರ ‘ಸಹಕಾರ್ ಸೆ ಸಮೃದ್ಧಿ’ (ಸಹಕಾರದ ಮೂಲಕ ಸಮೃದ್ಧಿ) ಎಂಬ ಯೋಜನೆಯ ಭಾಗವಾಗಿ ಈ ಸೇವೆ ಆರಂಭಿಸಲಾಗುತ್ತಿದ್ದು, ಈ ಪ್ಲಾಟ್‌ಫಾರಂ ಮೂಲಕ ದ್ವಿಚಕ್ರ ವಾಹನಗಳು, ಟ್ಯಾಕ್ಸಿಗಳು ಮತ್ತು ರಿಕ್ಷಾಗಳು ನೋಂದಾಯಿಸಿಕೊಂಡು ಟ್ಯಾಕ್ಸಿ ಸೇವೆ ನೀಡಬಹುದು ಎಂದರು.
ಓಲಾ ಮತ್ತು ಊಬರ್‌ಗಳ ಮೇಲೆ ಬೆಲೆ ತಾರತಮ್ಯದ ಆರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದ್ದು ಖಾಸಗಿ ರೈಡರ್ ಅಗ್ರಿಗೇಟರ್ ಆಪ್‌ಗಳಿಗೆ ಹೊಡೆದ ನೀಡಲಿದೆ.