Saturday, May 16, 2026
Homeಟಾಪ್ ನ್ಯೂಸ್SANDALWOOD: 'ಕೆಡಿ' ಸಿನಿಮಾಗೆ ಸೆನ್ಸಾರ್‌ ಕಿರಿಕಿರಿ, ಕನ್ನಡ ಚಿತ್ರ ಎಂಬ ಕಾರಣಕ್ಕೆ ಟಾರ್ಗೆಟ್‌ ಎಂದ ಪ್ರೇಮ್‌!

SANDALWOOD: ‘ಕೆಡಿ’ ಸಿನಿಮಾಗೆ ಸೆನ್ಸಾರ್‌ ಕಿರಿಕಿರಿ, ಕನ್ನಡ ಚಿತ್ರ ಎಂಬ ಕಾರಣಕ್ಕೆ ಟಾರ್ಗೆಟ್‌ ಎಂದ ಪ್ರೇಮ್‌!

ಬೆಂಗಳೂರು: ತಮಿಳಿನ ‘ಜನನಾಯಗನ್’ ಚಿತ್ರ ಎದುರಿಸುತ್ತಿರುವ ಸೆನ್ಸರ್‌ ಸಮಸ್ಯೆ ಈಗ ಸ್ಯಾಂಡಲ್‌ವುಡ್‌ ಚಿತ್ರಕ್ಕೂ ಆಗಿದೆ. ಹೌದು, ಸ್ಯಾಂಡಲ್‌ವುಡ್‌ನ (Sandalwood) ಬಹುನಿರೀಕ್ಷಿತ ‘ಕೆಡಿ’ ಸಿನಿಮಾಗೆ (KD Film) ಸೆನ್ಸಾರ್‌ ಸಮಸ್ಯೆ ಮಾಡುತ್ತಿದ್ದು, ಬೇಕು ಅಂತಲೇ  ಮುಂಬೈನ ಕೇಂದ್ರ ಸೆನ್ಸಾರ್ ಮಂಡಳಿಯು ಉದ್ದೇಶಪೂರ್ವಕವಾಗಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ‘ಕೆಡಿ’ ಚಿತ್ರದ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಕನ್ನಡ ಸಿನಿಮಾ ಎಂದು ಸಮಸ್ಯೆ ಮಾಡುತ್ತಿದ್ದಾರೆ
ಕನ್ನಡ ಸಿನಿಮಾಗಳಿಗೆ ಮುಂಬೈ ಸೆನ್ಸಾರ್ ಮಂಡಳಿಯಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂಬ ಕೂಗು ಈಗ ಜೋರಾಗಿದೆ. ನಿಯಮದ ಪ್ರಕಾರ, ಪ್ರಾದೇಶಿಕ ಸೆನ್ಸಾರ್ ಮಂಡಳಿಯು ಈಗಾಗಲೇ ಸಿನಿಮಾ ವೀಕ್ಷಿಸಿ, ಅದರಲ್ಲಿನ ರಕ್ತಪಾತದ ದೃಶ್ಯಗಳ ಹಿನ್ನೆಲೆಯಲ್ಲಿ ‘ಎ’ ಸರ್ಟಿಫಿಕೇಟ್ ನೀಡುವುದಾಗಿ ತಿಳಿಸಿತ್ತು. ಜೊತೆಗೆ ಹಾಡಿನ ಎರಡು ಸಾಲುಗಳನ್ನು ಬದಲಿಸಲು ಸೂಚಿಸಿತ್ತು. ಆದರೆ, ನಿರ್ದೇಶಕರು ಅಥವಾ ನಿರ್ಮಾಣ ಸಂಸ್ಥೆಯ ಗಮನಕ್ಕೆ ತರದೇ ಕೇಂದ್ರ ಸೆನ್ಸಾರ್ ಮಂಡಳಿಯು ಚಿತ್ರವನ್ನು ‘ರಿವೈಸಿಂಗ್ ಕಮಿಟಿ’ಗೆ ಕಳುಹಿಸಿರುವುದು ಚಿತ್ರತಂಡದ ಆಕ್ರೋಶಕ್ಕೆ ಕಾರಣವಾಗಿದೆ.

ಬೇಸರ ವ್ಯಕ್ತಪಡಿಸಿದ ನಿರ್ದೇಶಕ ಪ್ರೇಮ್

ಈ ಬೆಳವಣಿಗೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿರುವ ನಿರ್ದೇಶಕ ಪ್ರೇಮ್, “ಇದು ಕೇವಲ ಕನ್ನಡ ಸಿನಿಮಾ ಎಂಬ ಕಾರಣಕ್ಕೆ ನಡೆಯುತ್ತಿರುವ ರಾಜಕಾರಣವೇ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಪ್ರಾದೇಶಿಕ ಮಂಡಳಿಯ ತೀರ್ಮಾನವನ್ನು ಮೀರಿ ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸೆನ್ಸಾರ್ ಮಂಡಳಿಯ ಈ ಧೋರಣೆಯಿಂದಾಗಿ ಸಿನಿಮಾದ ಬಿಡುಗಡೆಯ ಹಾದಿಯಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆ ಇದೆ.‌

ಕೆಡಿ ಸಿನಿಮಾ ಹಾಡಿನ ವಿವಾದಕ್ಕೆ ವಿರಾಮ, ಗ್ರೀನ್‌ ಸಿಗ್ನಲ್‌ ಕೊಟ್ಟ ಮಹಿಳಾ ಆಯೋಗ

ಜೋಗಿ ಪ್ರೇಮ್ ನಿರ್ದೇಶನದ ಬಹುನಿರೀಕ್ಷಿತ ‘ಕೆಡಿ: ದಿ ಡೆವಿಲ್’ (KD Song) ಸಿನಿಮಾದ ‘ಸರ್ಸೆ ಸೆರಗ ಸರ್ಸೆ’ ಹಾಡಿನ ಸುತ್ತ ಎದ್ದಿದ್ದ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ರಾಷ್ಟ್ರೀಯ ಮಹಿಳಾ ಆಯೋಗದ ನೋಟಿಸ್ ಬೆನ್ನಲ್ಲೇ ದೆಹಲಿಗೆ ತೆರಳಿದ್ದ ನಿರ್ದೇಶಕ ಪ್ರೇಮ್, ಆಯೋಗಕ್ಕೆ ನೀಡಿದ ಸ್ಪಷ್ಟನೆಯ ನಂತರ ಹಾಡಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

‘ಕೆಡಿ’ ಚಿತ್ರದ ‘ಸರ್ಸೆ ಸೆರಗ ಸರ್ಸೆ’ ಹಾಡು ಬಿಡುಗಡೆಯಾದ ದಿನದಿಂದಲೂ ಅದರ ಸಾಹಿತ್ಯದ ವಿಚಾರವಾಗಿ ತೀವ್ರ ಟೀಕೆಗೆ ಗುರಿಯಾಗಿತ್ತು. ಹಾಡಿನಲ್ಲಿ ಬಳಸಲಾದ ಕೆಲವು ಪದಗಳು ಮಹಿಳೆಯರ ಘನತೆಗೆ ಧಕ್ಕೆ ತರುವಂತಿವೆ ಎಂದು ಆರೋಪಿಸಿ ಹಲವು ಸಂಘಟನೆಗಳು ದೂರು ದಾಖಲಿಸಿದ್ದವು. ಈ ವಿಷಯ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾದ ಬೆನ್ನಲ್ಲೇ, ರಾಷ್ಟ್ರೀಯ ಮಹಿಳಾ ಆಯೋಗವು ನಿರ್ದೇಶಕ ಪ್ರೇಮ್ ಹಾಗೂ ಚಿತ್ರತಂಡಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಇದನ್ನೂ ಓದಿ: ಕೆಡಿ ಸಿನಿಮಾದ ಮತ್ತೊಂದು ಹಾಡು ರಿಲೀಸ್‌, ನುಗ್ಗಿ ಹೊಡಿ ಅಂದ್ರು ಪ್ರೇಮ್-VIDEO

ಹೆಚ್ಚಿನ ಸುದ್ದಿ

Change Language »
error: Content is protected !!