Monday, June 15, 2026
Homeಟಾಪ್ ನ್ಯೂಸ್CBSE: ಮರು ಮೌಲ್ಯಮಾಪನ, ಉತ್ತರ ಪತ್ರಿಕೆ ಪರಿಶೀಲನಾ ಶುಲ್ಕದಲ್ಲಿ ಭಾರಿ ಕಡಿತ

CBSE: ಮರು ಮೌಲ್ಯಮಾಪನ, ಉತ್ತರ ಪತ್ರಿಕೆ ಪರಿಶೀಲನಾ ಶುಲ್ಕದಲ್ಲಿ ಭಾರಿ ಕಡಿತ

ನವದೆಹಲಿ: ಸಿಬಿಎಸ್‌ಇ (CBSE) 12ನೇ ತರಗತಿ (12th) ಪರೀಕ್ಷೆಯ ಮರುಮೌಲ್ಯಮಾಪನ (Revaluation) ಹಾಗೂ ಉತ್ತರ ಪತ್ರಿಕೆ (Answer Sheet) ಪರಿಶೀಲನೆಯ ಶುಲ್ಕವನ್ನು ಪ್ರತಿ ಪತ್ರಿಕೆಗೆ ₹100 ಕ್ಕೆ ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ (Education department) ಪ್ರಕಟಿಸಿದೆ.

ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ವ್ಯವಸ್ಥೆಯಿಂದಾಗಿ ವಿದ್ಯಾರ್ಥಿಗಳ ಅಂಕಗಳ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವನ್ನು ದೂರ ಮಾಡಲು ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಇನ್ನು, ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರ್ ಪರದೆಯ ಮೇಲೆ ಡಿಜಿಟಲ್ ರೂಪದಲ್ಲಿ ಮೌಲ್ಯಮಾಪನ ಮಾಡುವ ವಿಧಾನವೇ ‘ಒಎಸ್‌ಎಂ’ (OSM) ಆಗಿದೆ. ಈ ವ್ಯವಸ್ಥೆಯಿಂದ ಅಂಕಗಳಿಗೆ ತೊಂದರೆಯಾಗಬಹುದು ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಲಾ ಶಿಕ್ಷಣ ಕಾರ್ಯದರ್ಶಿ ಸಂಜಯ್ ಕುಮಾರ್ ಅವರು, “ಒಎಸ್‌ಎಂ ವ್ಯವಸ್ಥೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನುಸರಿಸುತ್ತಿರುವ ಅತ್ಯಂತ ಪಾರದರ್ಶಕ ವಿಧಾನವಾಗಿದೆ. 12ನೇ ತರಗತಿಯ ಒಟ್ಟು 98 ಲಕ್ಷ ಉತ್ತರ ಪತ್ರಿಕೆಗಳ ಪುಟಗಳನ್ನು ಸ್ಕ್ಯಾನ್ ಮಾಡಲಾಗಿದೆ. ಕೆಲವು ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳು ಬಳಸಿದ್ದ ಶಾಯಿ ತಿಳಿ ಬಣ್ಣದ್ದಾಗಿದ್ದರಿಂದ ಸ್ಕ್ಯಾನಿಂಗ್ ನಂತರ ಅಸ್ಪಷ್ಟತೆ ಕಂಡುಬಂದಿತ್ತು. ಅಂತಹ ಸುಮಾರು 13,000ಕ್ಕೂ ಹೆಚ್ಚು ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ಗುರುತಿಸಿ, ಪರೀಕ್ಷಕರಿಂದ ಕೈಯಿಂದಲೇ (ಭೌತಿಕವಾಗಿ) ಮೌಲ್ಯಮಾಪನ ಮಾಡಿಸಿ ಅಂಕಗಳನ್ನು ದಾಖಲಿಸಲಾಗಿದೆ” ಎಂದು ಸ್ಪಷ್ಟಪಡಿಸಿದರು.

ಈ ಹಿಂದೆ ಇದ್ದ ₹700 ಬದಲಿಗೆ ಇನ್ನು ಮುಂದೆ ಪ್ರತಿ ಪತ್ರಿಕೆಗೆ ₹100 ಪಾವತಿಸಬೇಕು. ಹಿಂದೆ ಇದ್ದ ₹500 ಬದಲಿಗೆ ಇನ್ನು ಮುಂದೆ ಪ್ರತಿ ಪತ್ರಿಕೆಗೆ ₹100 ನಿಗದಿಪಡಿಸಲಾಗಿದೆ.ಅಲ್ಲದೆ, ಯಾವುದೇ ನಿರ್ದಿಷ್ಟ ಪ್ರಶ್ನೆಯನ್ನು ಮಾತ್ರ ಮರುಪರಿಶೀಲಿಸಲು ಬಯಸಿದರೆ ಪ್ರತಿ ಪ್ರಶ್ನೆಗೆ ₹25 ಶುಲ್ಕವಿರುತ್ತದೆ.

ಇದೇ ವೇಳೆ, ಮರುಮೌಲ್ಯಮಾಪನದ ಸಂದರ್ಭದಲ್ಲಿ ವಿದ್ಯಾರ್ಥಿಯ ಅಂಕಗಳು ಹೆಚ್ಚಳವಾದರೆ, ಅವರು ಮರುಮೌಲ್ಯಮಾಪನಕ್ಕಾಗಿ ಪಾವತಿಸಿದ್ದ ಸಂಪೂರ್ಣ ಮೊತ್ತವನ್ನು ವಿದ್ಯಾರ್ಥಿಗೆ ಮರುಪಾವತಿ (Refund) ಮಾಡಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 3 ಭಾಷೆ ಕಡ್ಡಾಯ ಎಂದ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ, ಯಾವೆಲ್ಲಾ ತರಗತಿಗೆ ಅನ್ವಯ?

ಹೆಚ್ಚಿನ ಸುದ್ದಿ

Change Language »
error: Content is protected !!