Wednesday, November 13, 2024
Homeಟಾಪ್ ನ್ಯೂಸ್BY ELECTION : ಉಪಚುನಾವಣೆ : 3 ಕ್ಷೇತ್ರಗಳ ಕಣದಲ್ಲಿನ ಅಭ್ಯರ್ಥಿಗಳೆಷ್ಟು? ಇಲ್ಲಿದೆ ಮಾಹಿತಿ..

BY ELECTION : ಉಪಚುನಾವಣೆ : 3 ಕ್ಷೇತ್ರಗಳ ಕಣದಲ್ಲಿನ ಅಭ್ಯರ್ಥಿಗಳೆಷ್ಟು? ಇಲ್ಲಿದೆ ಮಾಹಿತಿ..

ಬೆಂಗಳೂರು: ರಾಜ್ಯದಲ್ಲಿ 3 ಕ್ಷೇತ್ರಗಳಲ್ಲಿ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ 19 ಮಂದಿ ನಾಮಪತ್ರ ಹಿಂಪಡೆದಿದ್ದು, ಒಟ್ಟು 47 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ನ. 13ರಂದು ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಈ ಮೂರು ಕ್ಷೇತ್ರಗಳಲ್ಲೂ ಬುಧವಾರ ಕೊನೆಯ ದಿನವಾಗಿತ್ತು. ಚನ್ನಪಟ್ಟಣದಿಂದ 7, ಶಿಗ್ಗಾಂವಿಯಿಂದ 11 ಮತ್ತು ಬಳ್ಳಾರಿಯಿಂದ ಒಬ್ಬರು ನಾಮಪತ್ರ ಹಿಂಪಡೆದಿದ್ದಾರೆ. ಒಟ್ಟಾರೆಯಾಗಿ ಚನ್ನಪಟ್ಟಣದಲ್ಲಿ 31, ಶಿಗ್ಗಾಂವಿ 8 ಹಾಗೂ ಸಂಡೂರಿನಲ್ಲಿ 6 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಚನ್ನಪಟ್ಟಣದಲ್ಲಿ 50 ಮಂದಿ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 12 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿದ್ದು, 7 ಮಂದಿ ನಾಮಪತ್ರ ಹಿಂಪಡೆದಿದ್ದಾರೆ. ಇದೀಗ ಒಟ್ಟು 31 ಮಂದಿ ಕಣದಲ್ಲಿ ಉಳಿದಿದ್ದರು. ಅದೇ ರೀತಿ ಈ ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಂಗ್ರೆಸ್‌ನಿಂದ ಸಿಪಿ ಯೋಗೇಶ್ವರ್‌ ಹಾಗೂ ಜೆಡಿಎಸ್‌- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿದ್ದಾರೆ.

ಶಿಗ್ಗಾಂವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಭರತ್‌ ಬೊಮ್ಮಾಯಿ , ಕಾಂಗ್ರೆಸ್‌ನಿಂದ ಯಾಸೀರ್‌ ಅಹ್ಮದ್‌ ಖಾನ್‌ ಪಠಾಣ್‌ ಸ್ಪರ್ಧಿಸಿದರೆ ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಈ. ಅನ್ನಪೂರ್ಣ, ಬಿಜೆಪಿಯಿಂದ ಬಂಗಾರು ಹನುಮಂತು ಸ್ಪರ್ಧಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!