ನವದೆಹಲಿ: ಈಶಾನ್ಯ ರಾಜ್ಯಗಳ ಎಲ್ಲಾ 8 ರಾಜಧಾನಿಗಳನ್ನು ಸಂಪರ್ಕಿಸುವ ಯೋಜನೆಗಳು 2025ರಲ್ಲಿ ಪೂರ್ಣಗೊಳ್ಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
‘‘2025ರ ವೇಳೆಗೆ 8 ರಾಜಧಾನಿಗಳಿಗೂ ರೈಲು, ರಸ್ತೆ ಮತ್ತು ವಾಯುಮಾರ್ಗ ಪೂರ್ಣಗೊಳ್ಳಲಿದೆ. ಇದಕ್ಕಾಗಿ 1.74 ಲಕ್ಷ ಕೋಟಿ ರೂಪಾಯಿಯ ಕಾಮಗಾರಿಗಳು ನಡೆಯುತ್ತಿವೆ’’ ಎಂದವರು ಹೇಳಿದರು.
ಮಿಝೋರಾಂಗೆ ಭೇಟಿ ನೀಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
‘‘1200 ಕೋಟಿ ರೂಪಾಯಿಯ ನಾಲ್ಕು ರಸ್ತೆ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಸಲಾಗಿದೆ. ಈ ಯೋಜನೆ ಪೂರ್ಣಗೊಂಡರೆ ವ್ಯಾಪಾರ, ಉದ್ದಿಮೆಯನ್ನು ಕೇವಲ ಮಿಝೋರಾಂನಲ್ಲಿ ಮಾತ್ರವಲ್ಲ, ರಾಜ್ಯಗಳ ನಡುವೆಯೂ ಹೆಚ್ಚಿಸಲಿದೆ’’ ಎಂದವರು ಹೇಳಿದರು.