Thursday, July 16, 2026
Homeಟಾಪ್ ನ್ಯೂಸ್BENGALURU: ಫುಟ್‌ಪಾತ್ ತೆರವು ಕಾರ್ಯ ಕೇವಲ ಕಣ್ಣೊರೆಸುವತಂತ್ರ - ಮೋಹನ್ ದಾಸ್ ಪೈ ಅಸಮಾಧಾನ

BENGALURU: ಫುಟ್‌ಪಾತ್ ತೆರವು ಕಾರ್ಯ ಕೇವಲ ಕಣ್ಣೊರೆಸುವತಂತ್ರ – ಮೋಹನ್ ದಾಸ್ ಪೈ ಅಸಮಾಧಾನ

ಬೆಂಗಳೂರು : ನಗರದ (Bengaluru) ಫುಟ್‌ಪಾತ್‌ಗಳ (footpath) ಒತ್ತುವರಿ ತೆರವು (Encroachment clearance) ಕಾರ್ಯಾಚರಣೆಯ ಬಗ್ಗೆ ಉದ್ಯಮಿ ಮೋಹನ್ ದಾಸ್ ಪೈ (Mohandas pai) ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಸದ್ಯ ನಡೆದಿರುವ ತೆರವು ಪ್ರಕ್ರಿಯೆ ಕೇವಲ ‘ಕಣ್ಣೊರೆಸುವ ತಂತ್ರ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಟೀಕಿಸಿದ್ದಾರೆ.

ಜಿಬಿಎ ಅಧಿಕಾರಿಗಳು ಮಾಡಿರುವ ತೆರವು ಕಾರ್ಯಾಚರಣೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರತ್ಯೇಕ ತನಿಖಾ ತಂಡವನ್ನು ರಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಈ ಕುರಿತು ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಬಿಎ ಮುಖ್ಯ ಆಯುಕ್ತರಿಗೆ ಟ್ವೀಟ್‌ ಟ್ಯಾಗ್ ಮಾಡಿರುವ ಪೈ, ಅಧಿಕಾರಿಗಳು ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಿದ್ದಲ್ಲಿ ಅಥವಾ ಕಳಪೆ ಮಟ್ಟದ ಕೆಲಸ ಮಾಡಿದ್ದಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಜೆಸಿಬಿ ಆರ್ಭಟ ಶುರು – ಇದು ಫುಟ್ ಪಾತ್ ತೆರವು ಎಲ್ಲೆಲ್ಲಿ?

ನಗರದ ಪಾದಚಾರಿ ಮಾರ್ಗಗಳು ಸಾರ್ವಜನಿಕರ ಸುಗಮ ಸಂಚಾರಕ್ಕೆ ಮುಕ್ತವಾಗಿರಬೇಕು. ಆದರೆ, ಪ್ರಸ್ತುತ ನಡೆದಿರುವ ತೆರವು ಕಾರ್ಯಗಳು ತೃಪ್ತಿಕರವಾಗಿಲ್ಲ. ಹೀಗಾಗಿ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಪ್ರಮುಖ ನಾಗರಿಕ ಕಾರ್ಯಕರ್ತರನ್ನು ಉಲ್ಲೇಖಿಸಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಬೆಂಗಳೂರಿನ ಮೂಲಸೌಕರ್ಯಗಳ ಸುಧಾರಣೆಗೆ ಇಂತಹ ಕಟ್ಟುನಿಟ್ಟಿನ ತಪಾಸಣೆಗಳು ಅತ್ಯಗತ್ಯ ಎಂದು ಪೈ ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ಸುದ್ದಿ

Change Language »
error: Content is protected !!