Wednesday, November 13, 2024
Homeಟಾಪ್ ನ್ಯೂಸ್ಫ್ಯಾನ್‌ ಮೇಡ್ ಐಸ್‌ಕ್ರೀಂ; ಆನಂದ್ ಮಹೀಂದ್ರ ಮೆಚ್ಚುಗೆ, ವಿಡಿಯೋ ವೈರಲ್

ಫ್ಯಾನ್‌ ಮೇಡ್ ಐಸ್‌ಕ್ರೀಂ; ಆನಂದ್ ಮಹೀಂದ್ರ ಮೆಚ್ಚುಗೆ, ವಿಡಿಯೋ ವೈರಲ್

ಯಾವುದೇ ಐಸ್‌ಕ್ರೀಂ ತಯಾರಿಕೆಗೆ ರೆಫ್ರೀಜರೇಟರ್, ಕೂಲರ್ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇಲ್ಲೊಬ್ಬ ಮಹಿಳೆ ಈ ಎರಡರ ಸಹಾಯವಿಲ್ಲದೇ ಐಸ್‌ಕ್ರೀಂ ತಯಾರಿಸಿದ್ದು, ಇವರ ಕ್ರಿಯಾಶೀಲತೆಗೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಯ ಮಹಾಪೂರವೇ ಹರಿದು ಬರುತ್ತಿದೆ.

ಹೌದು ಇವರು ಕೇವಲ ಸೀಲಿಂಗ್ ಫ್ಯಾನ್‌ ಬಳಸಿ ಐಸ್‌ಕ್ರೀಂ ತಯಾರಿಸಿ ತೋರಿಸಿದ್ದಾರೆ. ಖ್ಯಾತ ಉದ್ಯಮಿ ಆನಂದ್ ಮಹೀಂದ್ರ ಅವರು ಸೀಲಿಂಗ್ ಫ್ಯಾನ್‌ ಬಳಸಿ ಮಹಿಳೆಯು ಐಸ್‌ಕ್ರೀಂ ತಯಾರಿಸುತ್ತಿರುವ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇವರ ಕಾರ್ಯಕ್ಷಮತೆಗೆ ಭೇಷ್ ಎಂದಿದ್ದಾರೆ.

ಮನಸ್ಸಿದ್ದರೆ ಮಾರ್ಗ, ಕೈಯಿಂದ ತಯಾರಿಸಿದ, ಫ್ಯಾನ್‌ ಬಳಸಿ ಮಾಡಿದ ಐಸ್‌ಕ್ರೀಂ ಭಾರತದಲ್ಲಿ ಮಾತ್ರ ದೊರೆಯುತ್ತದೆ ಎಂಬ ಅಡಿಬರಹದಡಿ ವಿಡಿಯೋವನ್ನು ಹಂಚಿಕೊಂಡಿದ್ದು, ಇದನ್ನು ೬೮ ಸಾವಿರಕ್ಕೂ ಹೆಚ್ಚು ಮಂದಿ ಇಷ್ಟಪಟ್ಟಿದ್ದಾರೆ.

ಮೊದಲು ಮಹಿಳೆಯು ಐಸ್‌ಕ್ರೀಂ ತಯಾರಿಸಲು ಬೇಕಾದ ಪದಾರ್ಥಗಳನ್ನು ಪಾತ್ರೆಯಲ್ಲಿ ಕುದಿಸಿ, ಬಳಿಕ ಅದನ್ನು ಉದ್ದವಾದ ಡಬ್ಬದಲ್ಲಿ ಹಾಕುತ್ತಾಳೆ. ಅದನ್ನು ತೆಗೆದುಕೊಂಡು ಬಂದು ಫ್ಯಾನ್‌ಗೆ ಕಟ್ಟಿದ ಡಬ್ಬದಲ್ಲಿ ಇರಿಸಿ ಅದರ ಸುತ್ತ ಐಸ್‌ಕ್ಯೂಬ್‌ಗಳನ್ನು ಹಾಕುತ್ತಾಳೆ. ನಂತರ ಫ್ಯಾನ್ ಸ್ವಿಚ್‌ ಹಾಕುತ್ತಾಳೆ. ಫ್ಯಾನ್‌ನೊಟ್ಟಿಗೆ, ಆ ಪಾತ್ರೆಯು ತಿರುಗಲು ಪ್ರಾರಂಭಿಸುತ್ತದೆ. ಹೀಗೆ ಐಸ್‌ಕ್ರೀಂ ತಯಾರಿಸುತ್ತಾರೆ.

ಹೆಚ್ಚಿನ ಸುದ್ದಿ

error: Content is protected !!