ಕಲಬುರಗಿ: ವಿಧಾನಸಭೆ ಚುನಾವಣೆ ಹತ್ತಿರಾವಾಗ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಟಿಕೆಟ್ ಗಾಗಿ ಪೈಪೋಟಿ ಶುರುವಾಗಿದೆ. ಹಾಲಿ ಶಾಸಕರಿಗೆ ಹೇಗೂ ಟಿಕೆಟ್ ಸಿಗೋದು ಪಕ್ಕಾ ಎಂದು ಆರಾಮವಾಗಿದ್ದ ಹಾಲಿ ಶಾಸಕರಿಗೆ ಇದೀಗ ತಲೆನೋವು ಶುರುವಾಗಿದೆ. ಹಾಲಿ ಶಾಸಕರಿಗೆಲ್ಲರಿಗೂ ಟಿಕೆಟ್ ಸಿಗೋದಿಲ್ಲ ಅಂತ ಮಾಜಿ ಸಿಎಂ ಯಡಿಯೂರಪ್ಪ ನೀಡಿರುವ ಹೇಳಿಕೆ ಹಾಲಿ ಶಾಸಕರಿಗೆ ಶಾಕ್ ನೀಡಿದೆ.
ಕಲಬುರಗಿಯಲ್ಲಿ ಮಾತನಾಡಿದ ಯಡಿಯೂರಪ್ಪ ಹಲವು ಹಾಲಿ ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ. ಚುನಾವಣೆ ಗೆಲ್ಲಲು ಬಿಜೆಪಿ ತನ್ನದೇ ಕಾರ್ಯತಂತ್ರ ರೂಫಿಸಿದೆ ಎಂದ್ರು. ರಾಜ್ಯದಲ್ಲಿ ಬಿಜೆಪಿ ೧೪೦ ಸ್ಥಾನಗಳಲ್ಲಿ ಗೆಲ್ಲೋದು ಖಚಿತ. ಈಗಾಗಲೇ ತ್ರಿಪುರಾ ಮೇಘಾಲಯ ಹಾಗೂ ನಾಗಾಲ್ಯಾಂಡ್ ಚುನಾವಣೆಯಲ್ಲಿ ಬಿಜೆಪಿಯ ಶಕ್ತಿ ಏನೆಂಬುದು ಗೊತ್ತಾಗಿದೆ. ಮುಂದೆ ಕರ್ನಾಟಕದಲ್ಲೂ ಇದೇ ರೀತಿ ಬಿಜೆಪಿಯೇ ಅಧಿಕಾರಕ್ಕೆ ಬರೋದು ನಿಶ್ಚಿತ. ಕಾಂಗ್ರೆಸ್ ನಾಯಕರು ತಾವೆ ಗೆಲುವು ಸಾಧಿಸುತ್ತೇವೆ ಎಂದು ತಿರುಕನ ಕನಸು ಕಾಣುತ್ತಿದ್ದಾರೆ ಎಂದು ಬಿಎಸ್ ವೈ ಹೇಳಿದ್ರು.
ಇನ್ನು ಸಚಿವರಾದ ವಿ. ಸೋಮಣ್ಣ ಹಾಗೂ ನಾರಾಯಣಗೌಡ ಬಿಜೆಪಿ ತೊರೆಯುವ ಪ್ರರ್ಶನೆಯೇ ಇಲ್ಲ. ಬದಲಿಗೆ ಬೇರೆ ಬೇರೆ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಿದೆ ಎಂದ್ರು