Sunday, January 19, 2025
Homeಟಾಪ್ ನ್ಯೂಸ್ನುಗ್ಗಿಕೇರಿ ಆಂಜನೇಯನಿಗೆ ಬಿಎಸ್‌ವೈ ವಿಶೇಷ ಪೂಜೆ

ನುಗ್ಗಿಕೇರಿ ಆಂಜನೇಯನಿಗೆ ಬಿಎಸ್‌ವೈ ವಿಶೇಷ ಪೂಜೆ

ಧಾರವಾಡ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹನುಮ ಜಯಂತಿ ಅಂಗವಾಗಿ ಗುರುವಾರ ನಗರದ ಐತಿಹಾಸಿಕ ನುಗ್ಗಿಕೇರಿ ಶ್ರೀ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಹನುಮಂತ ದೇವರ ದರ್ಶನ ಪಡೆದ ಅವರು ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಬಿಎಸ್‌ವೈ, ಹನುಮ ಜಯಂತಿಯಂದು ನುಗ್ಗಿಕೇರಿ ಹನುಮಂತ ದರ್ಶನದ ಸೌಭಾಗ್ಯ ಲಭಿಸಿದೆ. ಶಿಕಾರಿಪುರದ ಹುಚ್ಚರಾಯ ಸ್ವಾಮಿ ಜಾತ್ರೆ ಇದ್ದು, ನಾನು ಅಲ್ಲಿ ಇರಬೇಕಿತ್ತು. ಹುಚ್ಚರಾಯನ ದರ್ಶನದ ಬದಲಿಗೆ ಇಲ್ಲಿ ಆಂಜನೇಯನ ದರ್ಶನ ಪಡೆಯುವ ಭಾಗ್ಯ ಲಭಿಸಿದ್ದು, ಜೀವನ ಸಾರ್ಥಕವಾಯಿತು. ರಾಜ್ಯದಲ್ಲಿ ಸುಭಿಕ್ಷೆ ಇದ್ದು, ಎಲ್ಲರಿಗೂ ಒಳ್ಳೆಯದಾಗಲಿ. ದೇವರ ಆಶೀರ್ವಾದದಿಂದ ಎಲ್ಲರೂ ನೆಮ್ಮದಿಯಿಂದ ಬದುಕುವ ಭಾಗ್ಯ ಸಿಗಲಿ ಎಂದರು.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತ ಪ್ರಶ್ನೆಗೆ ಇಲ್ಲಿ ಮಾತನಾಡುವುದು ಬೇಡ ಎಂದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಹಾಗೂ ಬಿಜೆಪಿ ಮುಖಂಡರಿದ್ದರು.

ಹೆಚ್ಚಿನ ಸುದ್ದಿ

error: Content is protected !!