Wednesday, December 4, 2024
Homeಕ್ರೈಂCRIME : ಹಳೆಯ ವೈಷಮ್ಯಕ್ಕೆ ಹರಿದ ನೆತ್ತರು - ಯಾದಗಿರಿಯಲ್ಲಿ ವ್ಯಕ್ತಿಯ ಭೀಕರ ಕೊಲೆ !

CRIME : ಹಳೆಯ ವೈಷಮ್ಯಕ್ಕೆ ಹರಿದ ನೆತ್ತರು – ಯಾದಗಿರಿಯಲ್ಲಿ ವ್ಯಕ್ತಿಯ ಭೀಕರ ಕೊಲೆ !

ಯಾದಗಿರಿ : ಹಳೆ ವೈಷಮ್ಯದ ಹಿನ್ನೆಲೆ ಹಾಡಹಗಲೇ ವ್ಯಕ್ತಿಯೊಬ್ಬನನ್ನ ದುಷ್ಕರ್ಮಿಗಳು ನಡು ರಸ್ತೆಯಲ್ಲಿ ಬರ್ಬರವಾಗಿ ಕೊಲೆಗೈದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ತಿಪ್ಪಣ್ಣ(35) ಕೊಲೆಯಾದ ದುರ್ದೈವಿ.
ಬೈಕ್ ಮೇಲೆ ತೆರಳ್ತಿದ್ದ ತಿಪ್ಪಣ್ಣನನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ. ಕೊಲೆಯಾದ ತಿಪ್ಪಣ್ಣ ಜಾಪಾನಾಯ್ಕ್ ತಾಂಡಾ ನಿವಾಸಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 

ತಿಪ್ಪಣ್ಣ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಬೈಕ್ ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

ಈ ವಿಷಯ ತಿಳಿಯುತಿದ್ದಂತೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿಲನೆ ನಡೆಸಿ, ಕೊಲೆ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಈ ಕುರಿತು ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹೆಚ್ಚಿನ ಸುದ್ದಿ

error: Content is protected !!