ಲಂಡನ್: ಬೆಳಕಿನ ಹಬ್ಬ ದೀಪಾವಳಿಯನ್ನು ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಆಚರಿಸಲಾಗುತ್ತಿದೆ. ಹಿಂದೂಗಳು, ಸಾಮಾನ್ಯ ಜನರು ಮಾತ್ರವಲ್ಲದೇ ಜಾಗತಿಕ ರಾಜಕೀಯ ನಾಯಕರು ಕೂಡಾ ಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಇದೀಗ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಕೂಡಾ ತಮ್ಮ ಅಧಿಕೃತ ನಿವಾಸದಲ್ಲಿ ಹಣತೆಗಳನ್ನು ಬೆಳಗಿ, ಪಟಾಕಿ ಹಚ್ಚಿ, ದೀಪಾವಳಿಯನ್ನು ಆಚರಿಸಿದ್ದಾರೆ. ಮಾತ್ರವಲ್ಲದೇ ಹಣೆಗೆ ಕುಂಕುಮ ಇಟ್ಟು, ಹಿಂದೂಗಳ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಅರುಣಿಮಾ ಕುಮಾರ್ ತಂಡದವರು ಪ್ರದರ್ಶಿಸಿದ ಕೂಚಿಪುಡಿ ನೃತ್ಯವನ್ನು ಕಣ್ತುಂಬಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ತಿಳಿಸಿ, ಹಬ್ಬಕ್ಕೆ ಶುಭಾಷಯ ತಿಳಿಸಿದ ಅವರು, ಯುಕೆಯಾದ್ಯಂತ ಆಚರಿಸುತ್ತಿರುವ ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ನೀವು ಮತ್ತು ನಿಮ್ಮ ಕುಟುಂಬ ಸಂತೋಷದಾಯಕವಾಗಿ ಹಬ್ಬವನ್ನು ಆಚರಿಸಬೇಕು ಎಂದು ನಾನು ಬಯಸುತ್ತೇನೆ. ಇದು ಒಗ್ಗೂಡುವ, ಸಮೃದ್ಧಿ ಮತ್ತು ಸ್ವಾಗತದ ಸಮಯವಾಗಿದೆ. ಮತ್ತು ಕತ್ತಲೆಯ ವಿರುದ್ಧ ಯಾವಾಗಲೂ ಜಯಗಳಿಸುವ ಬೆಳಕಿನ ಮೇಲೆ ನಮ್ಮ ಕಣ್ಣುಗಳನ್ನು ಇರಿಸುವ ಕ್ಷಣವಾಗಿದೆ ಎಂದು ಹೇಳಿದ್ದಾರೆ.