ಇಟಾನಗರ: ಭಾರತದಲ್ಲಿ ಪ್ರವಾಸದಲ್ಲಿದ್ದ ಬ್ರಿಟನ್ ಪ್ರಜೆಯೊಬ್ಬರು ಅರುಣಾಚಲ ಪ್ರದೇಶದ್ಲಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪತ್ತಿದ್ದಾರೆ.
71 ವರ್ಷದ ಬ್ರಿಟನ್ ಪ್ರಜೆ ಇವಾನ್ ಬ್ರೌನ್ ತಮ್ಮ ಸ್ನೇಹಿತನೊಂದಿಗೆ ಎರಡು ತಿಂಗಳು ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ಅರುಣಾಚಲ ಪ್ರದೇಶದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ಛಾಯಾಗ್ರಹಣದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ನಾವು ಈ ಸ್ಥಳದಲ್ಲಿ ಕೆಲವು ಘಟನೆಗಳ ಬಗ್ಗೆ ಪೊಲೀಸರು ಮತ್ತು ರಾಯಭಾರ ಕಚೇರಿಯಿಂದ ಮಾಹಿತಿಯನ್ನು ಪಡೆದುಕೊಂಡಿದ್ದೇವೆ ಮಗಳು ನಟಾಲಿ ಬ್ರೌನ್ ತಿಳಿಸಿದ್ದಾರೆ.