ಉತ್ತರ ಪ್ರದೇಶ: ಮದುವೆ ಸಂಭ್ರಮದಲ್ಲಿ ಹಾಡಿ, ಕುಣಿದು ಕುಪ್ಪಳಿಸೋದು ಸಾಮಾನ್ಯ.. ಆದ್ರೆ ಇಲ್ಲೊಬ್ಬ ವಧು ಮದುವೆ ಧಿರಿಸಿನಲ್ಲಿ ಕೂತು ಪಿಸ್ತೂಲ್ ಹಿಡಿದು ಗುಂಡು ಹಾರಿಸಿ ಇಕ್ಕಟ್ಟಿಗೆ ಸಿಲುಕಿದ್ದಾಳೆ
ಇತ್ತೀಚೆಗೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ವರನೊಂದಿಗೆ ಕೂತಿದ್ದ ವಧುವಿನ ಕೈಗೆ ವ್ಯಕ್ತಿಯೊಬ್ಬ ಬಂದು ಬಂದೂಕನ್ನು ನೀಡಿದ್ದಾನೆ. ಮದುವೆ ಸಂಭ್ರದಲ್ಲಿ ಮೈಮರೆತಿದ್ದ ವಧು ಪಿಸ್ತೂಲ್ ಹಿಡಿದು 4 ಸುತ್ತಿನ ಗುಂಡು ಹಾರಿಸಿದ್ದಾಳೆ. ಇದನ್ನು ಸಂಬಂಧಿಕನೊಬ್ಬ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ಆಧರಿಸಿ ಉತ್ತರಪ್ರದೇಶದ ಹತ್ರಾಸ್ ಜಂಕ್ಷನ್ ಪೊಲೀಸರು ವಧುವಿನ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 25 (9) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಧು ರಾಗ್ನಿ ಮೇಲೆ ಕೇಸ್ ದಾಖಲಾಗುತ್ತಿದ್ದಂತೆಯೇ ಬಂಧನದ ಭೀತಿಯಿಂದ ಆಕೆ ಪರಾರಿಯಾಗಿದ್ದಾಳೆ. ಆಕೆಗಾಗಿ ಹುಡುಕಾಟ ನಡೆಯುತ್ತಿದ್ದು ಇತ್ತ ಪತಿರಾಯ ಕಂಗಾಲಾಗಿದ್ದಾನೆ.