Sunday, January 25, 2026
Homeಕ್ರೈಂBENGALURU: 9.5 ಲಕ್ಷ ಲಂಚ ಕೇಸ್ : ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕರನ್ನು...

BENGALURU: 9.5 ಲಕ್ಷ ಲಂಚ ಕೇಸ್ : ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕರನ್ನು ಬಂಧಿಸಿದ ಸಿಬಿಐ 

ಬೆಂಗಳೂರು : ಭ್ರಷ್ಟಾಚಾರದ (Bribe) ಪ್ರಕರಣದಲ್ಲಿ ಬೆಂಗಳೂರಿನ (Bengaluru) ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕರಾಗಿರುವ ಓಬ್ಬ ಅಧಿಕಾರಿ ಸೇರಿದಂತೆ ಇಬ್ಬರನ್ನು ಸಿಬಿಐ (CBI) ಬಂಧಿಸಿದೆ. 9.5 ಲಕ್ಷ ಲಂಚ ಪಡೆದ ಆರೋಪದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಮೆಸರ್ಸ್ ಸುಧೀರ್ ಗ್ರೂಪ್ ಆಫ್ ಕಂಪನೀಸ್ ಎಂಬ ಖಾಸಗಿ ಕಂಪನಿಯ ವಿದ್ಯುತ್ ಉಪಕರಣಗಳಿಗೆ ಸಂಬಂಧಿಸಿದಂತೆ, ಕಂಪನಿಗೆ ಬೇಕಾದಂತೆ ಪರೀಕ್ಷಾ ವರದಿಗಳನ್ನು ನೀಡಲು ಲಂಚ ಪಡೆದ ಆರೋಪ ಕೇಳಿಬಂದಿತ್ತು.

ಭ್ರಷ್ಟಾಚಾರ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇಲೆ ಬೆಂಗಳೂರಿನ ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯ ಜಂಟಿ ನಿರ್ದೇಶಕರು ಮತ್ತು ಇತರ ಖಾಸಗಿ ವ್ಯಕ್ತಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಜನವರಿ 8 ರಂದು ಪ್ರಕರಣ ದಾಖಲಿಸಿಕೊಂಡಿತ್ತು.

​ಎಫ್‌ಐಆರ್ ದಾಖಲಿಸಿದ ನಂತರ, ಸಿಬಿಐ ಬಲೆ ಬೀಸಿ ಬೆಂಗಳೂರಿನ ಸೆಂಟ್ರಲ್ ಪವರ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಜಂಟಿ ನಿರ್ದೇಶಕರು ಮತ್ತು ಖಾಸಗಿ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ದಾಳಿ ಮಾಡಲಾಗಿತ್ತು. ಬೆಂಗಳೂರಿನಲ್ಲಿ 9.5 ಲಕ್ಷ ರೂಪಾಯಿ ಲಂಚದ ವಹಿವಾಟು ನಡೆಸುತ್ತಿದ್ದಾಗ ಬಂಧಿಸಲಾಗಿದೆ.

ಸಿಬಿಐ ನಡೆಸಿದ ಶೋಧದ ಸಮಯದಲ್ಲಿ, 3 ಕೋಟಿ 59 ಲಕ್ಷ ರೂಪಾಯಿ ನಗದು, ಅಮೆರಿಕನ್ ಡಾಲರ್, ಹಾಂಗ್‌ಕಾಂಗ್ ಡಾಲರ್, ಸಿಂಗಾಪುರ್ ಡಾಲರ್, ಇಂಡೋನೇಷಿಯನ್ ರುಪಿಯಾ, ಮಲೇಷಿಯನ್ ರಿಂಗಿಟ್, ಯುರೋ, ಯುವಾನ್ (ರೆನ್ಮಿನ್), ಸ್ವೀಡಿಷ್ ಕ್ರೋನಾ ಮತ್ತು ಯುಎಇ ಕರೆನ್ಸಿ ದಿರ್ಹಮ್ ಸೇರಿದಂತೆ 4 ಲಕ್ಷದ 5 ಸಾವಿರದ 858 ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು, ಆಭರಣಗಳು ಮತ್ತು ಇತರ ಅಪರಾಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಿಬಿಐ ನಡೆಸಿದ ದಾಳಿಯ ವೇಳೆ ಇಲ್ಲಿಯವರೆಗೆ ವಿದೇಶಿ ಕರೆನ್ಸಿ ಸೇರಿದಂತೆ ಸುಮಾರು 3 ಕೋಟಿ 76 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದ್ದು, ಮತ್ತಷ್ಟು ತಲಾಶ್ ಮಾಡಲಾಗುತ್ತಿದೆ.

ನರೇಗಾದಲ್ಲಿ 11 ಲಕ್ಷ ಕೋಟಿ ಅಕ್ರಮ ; CBIಗೆ ಕೊಡಿ ಎಂದ ಡಿಕೆಶಿ
ಮನ್ರೇಗಾ ಯೋಜನೆಯಲ್ಲಿ 11 ಲಕ್ಷ ಕೋಟಿ ಅಕ್ರಮ ನಡೆದಿದ್ದರೆ ಸಿಬಿಐ ತನಿಖೆಗೆ ವಹಿಸಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌, ಪ್ರಹ್ಲಾದ್‌ ಜೋಶಿ ಆರೋಪಕ್ಕೆ ತಿರುಗೇಟು ನೀಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ ಶಿವಕುಮಾರ್, ನರೇಗಾ ಯೋಜನೆಯಲ್ಲಿ 11 ಲಕ್ಷ ಕೋಟಿ ಅಕ್ರಮ ನಡೆದಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಆರೋಪಕ್ಕೆ ಪ್ರತಿಕ್ರಿಯಿಸಿದರು. ‘ಆ ಮನರೇಗಾಗೂ ಈ ಮನರೇಗಾಗೂ ಏನಿದೆ ಅಂತ ಚರ್ಚೆ ಮಾಡೋಕೆ ಹೇಳಿ. ದಿನಾಂಕ ಫಿಕ್ಸ್ ಮಾಡೋಣ, ಜನರಿಗೂ ಜಾಗೃತಿ ಮೂಡಿಸಬೇಕು. ಅವರ ಪಾರ್ಟಿಯ ಅಧ್ಯಕ್ಷ, ವಿರೋಧ ಪಕ್ಷದ ನಾಯಕ ಅಥವಾ ಕೇಂದ್ರ ಸರ್ಕಾರದ ನಾಯಕರು ಚರ್ಚೆಗೆ ಬರೋಕೆ ಹೇಳಿ. ಯಾವುದಾದರೂ ಟಿವಿನಲ್ಲಿ ಡಿಬೇಟ್ ಮಾಡೋಕೆ ಹೇಳಿ. ಅಲ್ಲೇನಿದೆ ನಮ್ಮಲ್ಲೇನಿದೆ ಅಂತ ಚರ್ಚೆ ಆಗಲಿ’ ಎಂದು ಹೇಳಿದರು.

ಇದನ್ನೂ ಓದಿ: ಹೈಕೋರ್ಟ್‌ ಮುಂಭಾಗದಲ್ಲೇ ಲಂಚ ಪಡೆಯುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಲೋಕಾಯುಕ್ತ ಬಲೆಗೆ

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!