Sunday, January 25, 2026
Homeಕ್ರೈಂBREAKING : ಪಶ್ಚಿಮ ಬಂಗಾಳ ರಾಜ್ಯಪಾಲರಿಗೆ ಕೊ*ಲೆ ಬೆದರಿಕೆ!

BREAKING : ಪಶ್ಚಿಮ ಬಂಗಾಳ ರಾಜ್ಯಪಾಲರಿಗೆ ಕೊ*ಲೆ ಬೆದರಿಕೆ!

ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳದ (West bengal) ರಾಜ್ಯಪಾಲ ಸಿ.ವಿ. ಆನಂದ ಬೋಸ್ (Anand bose )ಅವರಿಗೆ ಸ್ಫೋಟ (Blast) ಮಾಡುವುದಾಗಿ ಬೆದರಿಕೆ ಇಮೇಲ್ (Threaten mail) ಸಂದೇಶ ಬಂದಿದ್ದು, ಅವರ ನಿವಾಸ ಹಾಗೂ ಕಚೇರಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಕೋಲ್ಕತ್ತಾದ ಲೋಕಭವನದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು,ರಾಜ್ಯಪಾಲರ ಕಚೇರಿಯಿಂದಲೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ರಾಜ್ಯಪಾಲರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆಯ ಸಂದೇಶವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಲಾಗಿದೆ.

Z-ಪ್ಲಸ್ ವರ್ಗದ ಭದ್ರತೆಯಲ್ಲಿರುವ ರಾಜ್ಯಪಾಲರ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಬಂಗಾಳ ಪೊಲೀಸರು ಮತ್ತು CRPF ತಂಡ ಶ್ರಮವಹಿಸುತ್ತಿದೆ. ಅಧಿಕಾರಿಗಳು ಸಭೆ ಕೂಡ ನಡೆಸಿದ್ದು, ಅಗತ್ಯ ಭದ್ರತೆ ಬಗ್ಗೆ ಸೂಚನೆ ನೀಡಿದ್ದಾರೆ.

ರಾಜ್ಯಪಾಲರ ವಿರುದ್ಧ ಇಂತಹ ಬೆದರಿಕೆಗಳು ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಇದೇ ರೀತಿಯ ಬೆದರಿಕೆ ಸಂದೇಶಗಳು ಬಂದಿದ್ದು, ಯಾವುದೇ ಕಾರಣಕ್ಕೂ ಇದನ್ನೂ ಲಘುವಾಗಿ ಪರಿಗಣಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಟ್ರಂಪ್ ನಿಂದ ಪ್ರಧಾನಿ ಮೋದಿ ಅವಹೇಳನ – ಭಾರತಕ್ಕೆ ಮೌನವೇ ಆಭರಣ! 

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!