Wednesday, May 14, 2025
Homeಟಾಪ್ ನ್ಯೂಸ್BIG BREAKING NEWS : ಪಾಕಿಸ್ತಾನಿ ಪೈಲಟ್ ಸೆರೆ ಹಿಡಿದ ಭಾರತ ಸೇನೆ...

BIG BREAKING NEWS : ಪಾಕಿಸ್ತಾನಿ ಪೈಲಟ್ ಸೆರೆ ಹಿಡಿದ ಭಾರತ ಸೇನೆ…

ನವದೆಹಲಿ : ಇಂದು ಸಾಯಂಕಾಲ ಕತ್ತಲೆ ಆವರಿಸುತ್ತಿದ್ದಂತೆ ಪಾಪಿ ಪಾಕ್ ಜಮ್ಮು ಸೇರಿದಂತೆ ರಾಜಸ್ಥಾನ, ಪಂಜಾಬ್ ನ ಗಡಿಯಲ್ಲಿ ದಾಳಿಗೆ ಯತ್ನಿಸಿದ್ದು, ಈ ವೇಳೆ ಭದ್ರತಾ ದೃಷ್ಟಿಯಿಂದ ಸಂಪೂರ್ಣ ಬ್ಲ್ಯಾಕ್​​​​ ಔಟ್ ಘೋಷಣೆ ಮಾಡಲಾಗಿತ್ತು.

ಇದೇ ವೇಳೆ ಭಾರತೀಯ ಸೇನೆಯೂ ಪಾಕ್​ನ ದಾಳಿಗೆ ಪ್ರತ್ಯುತ್ತರ ನೀಡಿದ್ದಲ್ಲದೇ, ಓರ್ವ ಪಾಕ್​​ ಪೈಲಟ್​ ಅನ್ನು ಜೀವಂತವಾಗಿ ಸೆರೆಹಿಡಿದೆ ಎಂದು ತಿಳಿದುಬಂದಿದೆ.

ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪಾಕಿಸ್ತಾನಿ ಪೈಲಟ್ ಅನ್ನು ಭಾರತ ಜೀವಂತವಾಗಿ ಲಾಕ್ ಮಾಡಿದೆ ಎಂದು  ವರದಿಯಾಗಿದೆ. ಜೈಸಲ್ಮೇರ್ ಮತ್ತು ಅಖ್ನೂರ್‌ನ ಈ ಪ್ರದೇಶದ ಮಧ್ಯದಲ್ಲಿ ಪಾಕ್ ಪೈಲಟ್​​ ಸೆರೆಯಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಈಗಾಗಲೇ F-16, F-17 ಎಂಬ ಪಾಕ್ ಫೈಟರ್ ಜೆಟ್​ ಗಳನ್ನು ಭಾರತೀಯ ವಾಯು ಸೇನೆ ಬೂದಿ ಮಾಡಿದೆ. ಇನ್ನು ಕರಾಚಿ ಬಂದರಿನ ಮೇಲೆ ಭಾರತೀಯ ನೌಕಾಪಡೆ ದಾಳಿ ನಡೆಸಿ ಧ್ವಂಸಗೊಳಿಸಿದೆ.

ಹೆಚ್ಚಿನ ಸುದ್ದಿ

error: Content is protected !!