ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಫೇಸ್‌ಬುಕ್ (Facebook Post) ಪೋಸ್ಟ್/ವಿಡಿಯೋವನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದ (Restricted) ತಾಂತ್ರಿಕ “ದೋಷ”ಕ್ಕೆ ಸಂಬಂಧಿಸಿದಂತೆ ಮೆಟಾ (Meta) ಸಂಸ್ಥೆಯ ಜಾಗತಿಕ ಸಾರ್ವಜನಿಕ ನೀತಿ ವಿಭಾಗದ ಉಪಾಧ್ಯಕ್ಷ (VP of Global Public Policy) ಜೋಯಲ್ ಕಪ್ಲಾನ್ (Joel Kaplan) ಅವರು ಅಧಿಕೃತವಾಗಿ (Breaking News) ಕ್ಷಮೆಯಾಚಿಸಿದ್ದಾರೆ.
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ಸಂಸದೀಯ ಐಟಿ ಸಮಿತಿಯೊಂದಿಗೆ ನಡೆದ ಉನ್ನತ ಮಟ್ಟದ ಸಭೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಏನಿದು ಪೋಸ್ಟ್ ಡಿಲೀಟ್ ವಿವಾದ?
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ‘ಜೆನ್ ಝೆಡ್’ (Gen Z) ಯುವಜನತೆಯ ಸಂವಾದಕ್ಕೆ ಸಂಬಂಧಿಸಿದ ಪ್ರಮುಖ ವಿಡಿಯೋ ಫೇಸ್‌ಬುಕ್‌ನಲ್ಲಿ ಸುಮಾರು 5 ಗಂಟೆಗಳ ಕಾಲ (ಅರ್ಧರಾತ್ರಿ 12.30 ರಿಂದ ಮುಂಜಾನೆ 5 ಗಂಟೆಯವರೆಗೆ) ಸಾರ್ವಜನಿಕ ವೀಕ್ಷಣೆಗೆ ಲಭ್ಯವಿರಲಿಲ್ಲ. ಪ್ರಮುಖ ನಾಯಕರ ಹಾಗೂ ಸರ್ಕಾರದ ಅಧಿಕೃತ ಪೋಸ್ಟ್‌ಗಳನ್ನು ನಿಯಂತ್ರಿಸುವ ಆಲ್ಗರಿದಮ್ ಹಾಗೂ ವಿಷಯ ಪರಿಶೀಲನೆ (Content Moderation) ವ್ಯವಸ್ಥೆಯ ಬಗ್ಗೆ ಭಾರತ ಸರ್ಕಾರ ಹಾಗೂ ಸಂಸದೀಯ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
ಇದೊಂದು ತಾಂತ್ರಿಕ ಆಟೋಮೇಷನ್ ದೋಷದಿಂದ ಉಂಟಾದ ಪ್ರಮಾದ ಎಂದು ಒಪ್ಪಿಕೊಂಡ ಮೆಟಾ ಉನ್ನತಾಧಿಕಾರಿ ಜೋಯಲ್ ಕಪ್ಲಾನ್, ಈ ಕುರಿತು ಕ್ಷಮೆಯಾಚಿಸಿದ್ದು, ಭವಿಷ್ಯದಲ್ಲಿ ಇಂತಹ ಲೋಪಗಳು ಮರುಕಳಿಸದಂತೆ ತಾಂತ್ರಿಕ ವ್ಯವಸ್ಥೆಯನ್ನು ಬಲಪಡಿಸುವುದಾಗಿ ಭರವಸೆ ನೀಡಿದ್ದಾರೆ.
ಹಣ ಪಡೆದು ಕಂಟೆಂಟ್ ಬೂಸ್ಟಿಂಗ್ ; ಕೃತ್ಯ ಒಪ್ಪಿಗೊಂಡ ಮೆಟಾ
ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ವೀಡಿಯೊವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಸಮನ್ಸ್ ಪಡೆದಿದ್ದ ಮೆಟಾ (Meta) ಸಂಸ್ಥೆಯ ಜಾಗತಿಕ ತಂಡವು ಬುಧವಾರ ಐಟಿ ಸಚಿವ ಅಶ್ವಿನಿ ವೈಷ್ಣವ್ ಮತ್ತು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದೆ. ಈ ಸಭೆಯಲ್ಲಿ ಮೆಟಾ ಅಧಿಕಾರಿಗಳು ಅನೇಕ ವಿಚಾರಗಳನ್ನ ಒಪ್ಪಿಕೊಂಡಿದ್ದು, ವಿಷಯಗಳನ್ನು ‘ಬೂಸ್ಟ್’ ಮಾಡಲು ಭಾರಿ ಪ್ರಮಾಣದ ಹಣವನ್ನು ಪಾವತಿಸಲಾಗುತ್ತಿತ್ತು ಎಂದು ಹೇಳಿದೆ.
ಇನ್ನು ಈ ಉನ್ನತ ಮಟ್ಟದ ಸಭೆಯ ವೇಳೆ ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಡುಬಂದ ಬಾಲ ಲೈಂಗಿಕ ದೌರ್ಜನ್ಯ ವಿಷಯಗಳು (CSEAM), ಡಿಪ್‌ಫೇಕ್ ವಿಷಯಗಳು ಮತ್ತು ತಾಂತ್ರಿಕ ಪ್ರಮಾದಗಳಿಗಾಗಿ ಕ್ಷಮೆಯಾಚಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿದೆ. 45 ನಿಮಿಷಗಳ ಕಾಲ ನಡೆದ ಈ ಸುದೀರ್ಘ ಸಭೆಯಲ್ಲಿ ಮೆಟಾದ ಜಾಗತಿಕ ವ್ಯವಹಾರಗಳ ಅಧಿಕಾರಿ ಜೋಯಲ್ ಕಪ್ಲಾನ್ ಸೇರಿದಂತೆ ಪ್ರಮುಖ ಕಾರ್ಯನಿರ್ವಾಹಕರು ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಹಾಗೂ ಇತರೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ : ಮೋದಿ ಕೈಗೊಂಡ ಕ್ರಮಗಳು ವಿದ್ಯಾರ್ಥಿಗಳಿಗೆ ವರದಾನ – ಲೋಕಸಭೆಯಲ್ಲಿ ತೇಜಸ್ವಿ ಸೂರ್ಯ ಅಬ್ಬರ : VIDEO