Tuesday, May 19, 2026
Homeಟಾಪ್ ನ್ಯೂಸ್BREAKING NEWS: ಜಾತಿಗಣತಿಗೆ ಸಮಯ ಬದಲಾವಣೆ, ದಿನಾಂಕವೂ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

BREAKING NEWS: ಜಾತಿಗಣತಿಗೆ ಸಮಯ ಬದಲಾವಣೆ, ದಿನಾಂಕವೂ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ (State Government) ನಡೆಸಲಾಗುತ್ತಿರುವ ಸಾಮಾಜಿಕ, ಆರ್ಥಿಕ (ಜಾತಿಗಣತಿ) ಸಮೀಕ್ಷೆಯಲ್ಲಿ (Census) ಮಹತ್ವದ ಬದಲಾವಣೆ (Change) ಮಾಡಲಾಗಿದೆ. ಸಮಯ ಹಾಗೂ ಸಮೀಕ್ಷೆಯ ದಿನಾಂಕವನ್ನು ವಿಸ್ತರಿಸಿ ಸರ್ಕಾರ ಆದೇಶಿಸಿದೆ (Order).

ತರಾತುರಿಯಲ್ಲಿ ಸಮೀಕ್ಷೆ ಮಾಡಿ ಮುಗಿಸುವುದರ ಉದ್ದೇಶವೇನು? ಹಲವು ಶಿಕ್ಷಕರಿಗೂ ತರಬೇತಿ ನೀಡದೇ ಸಮೀಕ್ಷೆ ಮಾಡಿಸುತ್ತಿರುವುದಲ್ಲದೇ, ಶಿಕ್ಷಕರಿಗೂ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂಬುವುದು ಅನೇಕ ಸಮೀಕ್ಷೆದಾರರು ಖುದ್ದು ಅಳಲು ತೋಡಿಕೊಂಡಿದ್ದಾರೆ. ಇನ್ನು ನಾಳೆಯೇ ಮುಕ್ತಾಯವಾಗಬೇಕಿದ್ದ ಸಮೀಕ್ಷೆಯು ಪೂರ್ಣಗೊಳ್ಳದ ಕಾರಣಕ್ಕೆ ಅವಧಿಯನ್ನು ಇದೀಗ ವಿಸ್ತರಿಸಲಾಗಿದೆ.

ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಅವಧಿಯನ್ನು ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ. ಬೆಂಗಳೂರಿನಲ್ಲಿ ಅಕ್ಟೋಬರ್ 24ರವರೆಗೆ ಸಮೀಕ್ಷೆಗಾಗಿ ದಿನಾಂಕ ವಿಸ್ತರಣೆ ಮಾಡಲಾಗಿದ್ದು, ಇತರೆ ಜಿಲ್ಲೆಗಳಲ್ಲಿ ಅ.12ರವರೆಗೆ ಮಾಡಲು ಕಾಲಾವಕಾಶವನ್ನು ನೀಡಲಾಗಿದೆ. ಈ ಕುರಿತು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.

ಬೆಳಗ್ಗೆ ಶಾಲೆ, ಮಧ್ಯಾಹ್ನ ಸಮೀಕ್ಷೆ

ದಸರಾ ರಜೆ ಬಳಿಕ ಶಾಲೆಗಳು ಮತ್ತೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸಮೀಕ್ಷೆಗೆ ಶಿಕ್ಷಕರ ವೇಳಾಪಟ್ಟಿಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ ವೇಳೆ ಶಾಲೆ, ಮಧ್ಯಾಹ್ನದ ಬಳಿಕ ಸಮೀಕ್ಷೆಗೆ ಶಿಕ್ಷಕರು ತೆರಳಬೇಕು. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಬೇಕು. ನಂತರ ಸಮೀಕ್ಷೆ ಕೈಗೊಳ್ಳಬೇಕು ಎಂದು ಮಧ್ಯಾಹ್ನಕ್ಕೆ ಶಿಕ್ಷಕರ ಸಮಯವನ್ನು ಸಮೀಕ್ಷೆಗೆ ಮೀಸಲು ಇಡಬೇಕೆಂದು ಆದೇಶದಲ್ಲಿ ಉಲ್ಲೇಖಿಸಿ ಸಮೀಕ್ಷೆಯ ವೇಳಾಪಟ್ಟಿಯಲ್ಲಿ ಮಾರ್ಪಾಡು ಮಾಡಲಾಗಿದೆ.

ಮಧ್ಯಾಹ್ನದಿಂದ ಶಾಲೆಗಳಿಗೆ ರಜೆ

ರಜಾದಿನಗಳಲ್ಲೂ ಶಿಕ್ಷಕರು ಸಮೀಕ್ಷೆ ಮಾಡುವುದರ ಜೊತೆಗೆ ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಸೂಚಿಸಲಾಗಿದೆ. ಸಮೀಕ್ಷೆ ಹಿನ್ನೆಲೆಯಲ್ಲಿ ಮಧ್ಯಾಹ್ನದ ಬಳಿಕ ಶಾಲೆಗಳಿಗೆ ರಜೆ ನೀಡಲಾಗಿದೆ. ಸಮೀಕ್ಷೆಗೆ ಶಿಕ್ಷಕರನ್ನು ನಿಯೋಜಿಸಿರುವ ಹಿನ್ನೆಲೆಯಲ್ಲಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1ರವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಆದ್ದರಿಂದ ಮಧ್ಯಾಹ್ನ ಒಂದು ಗಂಟೆಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ರಜೆ ಇರಲಿವೆ.

ವಿಸ್ತರಿಸಿದರೆ ಸಮೀಕ್ಷೆ ಮುಗಿಯುತ್ತೆ ಎಂದಿದ್ದ ಸಚಿವ ಪರಮೇಶ್ವರ್‌

ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಶೇ.80 ರಷ್ಟು ಮುಗಿದಿದೆ. ಉಳಿದಿರುವ ಸಮೀಕ್ಷೆ ಮಾಡಲು ಮೂರರಿಂದ ನಾಲ್ಕು ದಿನಗಳ ಕಾಲ ವಿಸ್ತರಣೆ ಮಾಡುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಇಂದು ಬೆಳಗ್ಗೆಯಷ್ಟೇ ಅಭಿಪ್ರಾಯಪಟ್ಟಿದ್ದರು.

ಸಮೀಕ್ಷೆಗೆ ಸಹಕಾರ ಕೊಡಬೇಕು
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ಜನರಿಗೆ ಈ ಸಮೀಕ್ಷೆ ಮಾಡುತ್ತಿದೆ. ಅದಕ್ಕೆ ಎಲ್ಲರೂ ಸಹಕಾರ ಕೊಡಬೇಕು. ಸುಮ್ಮನೇ ಸಮೀಕ್ಷೆ ವಿಚಾರವಾಗಿ ಇಲ್ಲ ಸಲ್ಲದ ಗೊಂದಲಗಳನ್ನ ಸೃಷ್ಟು ಮಾಡಬಾರದು ಎಂದು ಸಮೀಕ್ಷೆ ಬಗ್ಗೆ ಮಾತನಾಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಅನೇಕರಿಗೆ ಈ ಸಮಯದಲ್ಲಿ ಸಲಹೆ ಕೊಟ್ಟಿದ್ದಾರೆ. ಈ ಸಮೀಕ್ಷೆಯನ್ನ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಮಾಡಲಾಗಿದೆ. ವಿವಿಧ ರೀತಿಯಲ್ಲಿ ಈ ಸಮೀಕ್ಷೆ ಆಗುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಶೇ. 70ರಷ್ಟು ಸಮೀಕ್ಷೆ ಆಗಿದ್ದರೆ, ಇನ್ನೂ ಕೆಲವೆಡೆ 50 ರಷ್ಟು ಹಾಗೂ 60 ರಷ್ಟು ಆಗಿದ್ದು.. ಕೆಲ ಜಿಲ್ಲೆಗಳಲ್ಲಿ ಸಮೀಕ್ಷೆ ಮುಗಿಯುವ ಹಂತಕ್ಕೆ ಬಂದಿದೆ ಎಂದು ಹೇಳಿದ್ದಾರೆ.

ಅವಧಿ ವಿಸ್ತರಣೆ ಮಾಡಿದರೆ ಸಮೀಕ್ಷೆ ಮುಗಿಯುತ್ತದೆ
ನಾವು ರಾಜ್ಯದಲ್ಲಿ ಆಗುತ್ತಿರುವ ಸಮೀಕ್ಷೆಯ ಸರಾಸರಿಯನ್ನ ಗಮನಿಸಿದರೆ ಇನ್ನು ಶೇ 20 ರಿಂದ 25 ರಷ್ಟು ಸಮೀಕ್ಷೆ ಮಾಡುವುದು ಬಾಕಿ ಇದೆ. ಈ ಮೊದಲು ನಾಳೆ ಅಂದರೆ ಅಕ್ಟೋಬರ್‌ 7 ಸಮೀಕ್ಷೆ ಪೂರ್ಣ ಮಾಡಲು ಗಡುವು ನೀಡಲಾಗಿತ್ತು. ಆದರೆ ಇನ್ನು ಕೆಲ ಸಮಯ ಬೇಕಾಗುತ್ತದೆ. ಹಾಗಾಗಿ ಅವಧಿಯನ್ನ ವಿಸ್ತರಣೆ ಮಾಡಿದರೆ ಮುಗಿಸಬಹುದು ಎಂದಿದ್ದಾರೆ. ಸದ್ಯ ಸಿಎಂ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯ ಪ್ರವಾಸದಲ್ಲಿ ಇದ್ದಾರೆ. ಸಂಜೆ ವಾಪಾಸ್‌ ಬರುತ್ತಾರೆ. ನಂತರ ಈ ಬಗ್ಗೆ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತಾರೆ, ಜಿಲ್ಲಾವಾರು ಮಾಹಿತಿಗಳ ಪಡೆದುಕೊಂಡು ವಿಸ್ತರಣೆ ಮಾಡುವ ನಿರ್ಧಾರ ಪಡೆಯುತ್ತಾರೆ.

ಇದನ್ನೂ ಓದಿ: ಜಾತಿ ಸಮೀಕ್ಷೆ ಹೆಸರಲ್ಲಿ ವಂಚಕರು ಬರ್ತಿದ್ದಾರಂತೆ..! ಓಟಿಪಿ ಕೇಳ್ತಿದ್ದಾರಾ ನಕಲಿ ಗಣತಿದಾರರು?

ಹೆಚ್ಚಿನ ಸುದ್ದಿ

Change Language »
error: Content is protected !!