Wednesday, May 14, 2025
Homeಕ್ರೈಂBREAKING NEWS : ಸುಮ್ಮನಿರದ ಪಾಕ್: ಗಡಿಯಲ್ಲಿ ಮತ್ತೆ ಡ್ರೋನ್, ಶೆಲ್‌ ದಾಳಿ - VIDEO

BREAKING NEWS : ಸುಮ್ಮನಿರದ ಪಾಕ್: ಗಡಿಯಲ್ಲಿ ಮತ್ತೆ ಡ್ರೋನ್, ಶೆಲ್‌ ದಾಳಿ – VIDEO

ನವದೆಹಲಿ : ಪಾಪಿ ಪಾಕಿಸ್ತಾನ ಕತ್ತಲಾಗುತ್ತಿದ್ದಂತೆ ನಿನ್ನೆಯಂತೆ ಇಂದೂ ಕೂಡಾ ಮತ್ತೆ ಡ್ರೋನ್ ಹಾಗೂ ಶೆಲ್‌ ದಾಳಿ ನಡೆಸಿದೆ.

ಪಾಕಿಸ್ತಾನವು ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್ ಮತ್ತು ಪಠಾಣ್​​ ಕೋಟ್​ ಮೇಲೆ ಡ್ರೋನ್ ದಾಳಿಗೆ ಯತ್ನಿಸಿದ್ದು, ಭಾರತ ಭದ್ರತಾ ಪಡೆ ಅವುಗಳನ್ನು ಹೊಡೆದುರುಳಿಸಿದೆ.

ಪಾಕ್ ನಿಂದ ಮತ್ತೆ ಕದನವಿರಾಮ ಉಲ್ಲಂಘನೆಯಾಗಿದ್ದು, ಸುಮಾರು ನಾಲ್ಕು ಡ್ರೋನ್​​ಗಳನ್ನು ಭಾರತ ಸೇನೆ ಹೊಡೆದು ಬಿಸಾಕಿದೆ ಎಂದು ತಿಳಿದುಬಂದಿದೆ. ಸದ್ಯ ಸ್ಥಳದಲ್ಲಿ ಸಂಪೂರ್ಣ ಬ್ಯ್ಲಾಕ್ ಔಟ್ ಜಾರಿಗೊಳಿಸಲಾಗಿದೆ.

ಈ ಕುರಿತು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪೋಸ್ಟ್‌ ಹಂಚಿಕೊಂಡಿದ್ದು, ಇದೀಗ ನಾನಿರುವ ಸ್ಥಳದಲ್ಲೇ ಸ್ಪೋಟದ ಸದ್ದು ಕೇಳಿಬರುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!