ನವದೆಹಲಿ : ಪಾಕಿಸ್ತಾನ ಜಮ್ಮುವಿನ ಏರ್ಪೋರ್ಟ್ ಅನ್ನು ಗುರಿಯಾಗಿಸಿ ಡ್ರೋಣ್ ದಾಳಿಗೆ ಯತ್ನಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಮಹಾ ತಪ್ಪು ಮಾಡಿದೆ.
ಜಮ್ಮುವಿನ ಹಲವೆಡೆ ಶೆಲ್ ದಾಳಿ ಮುಂದುವರಿಸಿದ್ದಲ್ಲದೇ, ಪಠಾಣ್ಕೋಟ್ನ ವಾಯು ನೆಲೆಯ ಮೇಲೆಯೂ ಕ್ಷಿಪಣಿ ದಾಳಿಗೆ ಪ್ರಯತ್ನಿಸಿದೆ ಎಂದು ವರದಿಯಾಗಿದೆ.
Big news : Pakistan has attacked Jammu, at least 8 missiles have been fired by them. India's air defence (S400) gets activated.. pic.twitter.com/IyNNVwFO56
— Mr Sinha (@MrSinha_) May 8, 2025
ಪೂಂಚ್ನಲ್ಲಿ ಭಾರತದ ಅಮಾಯಕರ ಮೇಲೆ ಗುಂಡಿನ ದಾಳಿ ನಡೆಸಿದ್ದ ಪಾಕ್ ಹಲವರನ್ನು ಕೊಂದಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತವೂ ಪಾಕ್ಗೆ ನುಗ್ಗಿ ಲಾಹೋರ್ನ ಏರ್ ಡಿಫೆನ್ಸ್ ಸಿಸ್ಟಂ ಅನ್ನು ಧ್ವಂಸಗೊಳಿಸಿ ಬುದ್ಧಿ ಕಲಿಸಿತ್ತು. ಹೀಗಿದ್ದೂ ಪಾಕ್ ನಡೆಸಿದ ಅದರ ಈ ಅಪ್ರಚೋದಿತ ದಾಳಿಗೆ ತಕ್ಕ ಪಾಠ ಕಲಿಯುವ ಸನ್ನಿವೇಶ ನಿರ್ಮಾಣವಾಗಿದೆ. ಇನ್ನು ಭಾರತೀಯ ಸೇನೆಯು ಪಾಕ್ನ ಎಂಟೂ ಕ್ಷಿಪಣಿಗಳನ್ನು ಇದೀಗ ಹೊಡೆದುರುಳಿಸಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಸೇನೆಯ- ಎಸ್-400 ಮೂಲಕ ಪಾಕ್ ಕ್ಷಿಪಣಿಗಳನ್ನು ಉಡೀಸ್ ಮಾಡಿದೆ.
ಜಮ್ಮುವಿನ ಕ್ಷಿಪಣಿಗಳನ್ನು ಗುರಿ ಮಾಡಿ ಪಾಕ್ ದಾಳಿ ಯತ್ನವನ್ನು ಮುಂದುವರಿಸಿದೆ ಎಂದು ತಿಳಿದುಬಂದಿದೆ. ಪಾಕ್ ಈ ದಾಳಿ ಗಮನಿಸಿದರೆ ಭಾರತವನ್ನು ಪಾಕ್ ಯುದ್ಧಕ್ಕೆ ಪ್ರಚೋದನೆ ನೀಡುತ್ತಿದೆ ಎಂಬುವುದು ಖಚಿತವಾದಂತಿದೆ.