ಬೆಂಗಳೂರು : ಇದೇ ಜ.19ರಂದು ನೇರಳೆ ಮಾರ್ಗದಲ್ಲಿ ಕಬ್ಬನ್ ಪಾರ್ಕ್ ಮತ್ತು ಎಂಜಿ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮೆಟ್ರೋ ವಾಣಿಜ್ಯ ಸೇವೆ ಭಾಗಶಃ ಸ್ಥಗಿತವಾಗಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ಮೂಲಕ ತಿಳಿಸಿದೆ.
ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ & ಮೆಜೆಸ್ಟಿಕ್ ನಿಲ್ದಾಣ ಮತ್ತು ಇಂದಿರಾನಗರದ ಮೆಟ್ರೋ ಸ್ಟೇಷನ್ ನಡುವೆ ಅಂದು ಬೆಳಗ್ಗೆ 7 ಗಂಟೆಯಿಂದ ಬೆ.10 ಗಂಟೆಯವರೆಗೆ ಮೆಟ್ರೋ ರೈಲು ಸೇವೆ ಇರುವುದಿಲ್ಲ.
ಹಸಿರು ಮಾರ್ಗದ ರೈಲು ಸಮಯದಲ್ಲಿ ಯಾವುದೇ ಬದಲಾವಣೆಗಳು ಇಲ್ಲ, ಎಂದಿನಂತೆ ಮೆಟ್ರೋ ರೈಲುಗಳ ಸೇವೆ ಇರಲಿದೆ.
ಇನ್ನು ನೇರಳೆ ಮಾರ್ಗದ ಇತರ ವಿಭಾಗಗಳಲ್ಲಿ ಬರುವ ಚಲ್ಲಘಟ್ಟ ಮತ್ತು ಮೆಜೆಸ್ಟಿಕ್ ಹಾಗೂ ವೈಟ್ಫೀಲ್ಡ್ (ಕಾಡುಗೋಡಿ) ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ, ಮೇಲಿನ ಅವಧಿಯಲ್ಲಿ ನಿಗದಿತ ವೇಳಾಪಟ್ಟಿಯಂತೆ ರೈಲು ಸೇವೆಗಳು ಬೆಳಗ್ಗೆ 7 ಗಂಟೆಯಿಂದ ಪ್ರಾರಂಭವಾಗಲಿವೆ ಎಂದು BMRCL ಮಾಹಿತಿ ನೀಡಿದೆ.