ದಕ್ಷಿಣ ಕನ್ನಡ : ಮಂಗಳೂರಿನ ಉಳ್ಳಾಲ ತಾಲೂಕಿನ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣ ಸಂಬಂಧ ಮಂಗಳೂರು ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಮಿಷನರ್ ಅನುಪಮ್ ಅಗರ್ವಾಲ್ ಅವರು, ಬಂಧಿತರಿಂದ 2 ಗೋಣಿ ಚೀಲ, ತಲ್ವಾರ್, 2 ಪಿಸ್ತೂಲ್ ಜಪ್ತಿ ಮಾಡಲಾಗಿದೆ. ಇನ್ನಿತರ ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಲಾಗಿದೆ. ದರೋಡೆ ಮಾಡಿದ ನಂತರ ಆರೋಪಿಗಳು ಕೇರಳ ಮೂಲಕ ತಮಿಳುನಾಡಿನ ತಿರುವನ್ವೇಲಿಗೆ ತೆರಳಿದ್ದರು ಎಂದು ಕಮಿಷನರ್ ಹೇಳಿದರು.
ಜ.17ರಂದು ಕೆ.ಸಿ.ರೋಡ್ ಶಾಖೆಯ ಕೋಟೆಕಾರ್ ಬ್ಯಾಂಕ್ಗೆ ನುಗ್ಗಿದ್ದ ಐವರು ದರೋಡೆಕೋರರು, ಬರೋಬ್ಬರಿ ರೂ.12 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣ, ನಗದು ದೋಚಿದ್ದರು. ಫಿಯಟ್ ಖಾರಿನ್ನಲ್ಲಿ ಕದ್ದ ಮಾಲನ್ನು ಚೀಲದಲ್ಲಿ ತುಂಬಿಕೊಂಡು ಎಸ್ಕೇಪ್ ಆಗಿದ್ದರು. ಮಹಾರಾಷ್ಟ್ರದ ಕಾರನ್ನು ಬಳಸಿ ಖದೀಮರು ದರೋಡೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.