ಬೆಂಗಳೂರು : ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವಾಗ ಕಡ್ಡಾಯವಾಗಿ ಸ್ಮಾರ್ಟ್ ಮೀಟರ್ (smart meter) ಅಳವಡಿಸಿಕೊಳ್ಳಬೇಕು ಎಂಬ ಆದೇಶ (order) ಆಕ್ಷೇಪಿಸಿ ಅರ್ಜಿ ವಿಚಾರಣೆ ನಡೆಸುತ್ತಿರುವ ಇಂದು ಕರ್ನಾಟಕ ಹೈಕೋರ್ಟ್ನಲ್ಲಿ(Karnataka High Court) ನಡೀತು.
ಗುತ್ತಿಗೆ ಪಡೆದಿರುವ ರಾಜಶ್ರೀ ಎಲೆಕ್ಟ್ರಿಕಲ್ಸ್ ಪರ ವಾದಿಸಿದ ಹಿರಿಯ ವಕೀಲ ಕೆ ಎನ್ ಫಣೀಂದ್ರ, ಅರ್ಜಿದಾರರು ಯಾವುದೇ ರೀತಿಯಲ್ಲಿ ಬಾದಿತರಾಗಿಲ್ಲ ಎಂದರು. ಎಷ್ಟು ಸ್ಮಾರ್ಟ್ ಮೀಟರ್ ಅಳವಡಿಸಲಾಗಿದೆ ಈಗ ಎಂದು ಪೀಠ ಪ್ರಶ್ನಿಸ್ತು. ಇದುವರೆಗೆ ನೂತನವಾಗಿ ಸುಮಾರು 20 ಸಾವಿರ ಸಂಪರ್ಕ ಕಲ್ಪಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಉತ್ತರಿಸಿದ್ರು.
ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಹೆಸರಲ್ಲಿ ಬಡವರ ಜೀವ ಹಿಂಡಬೇಡಿ : ಸರ್ಕಾರಕ್ಕೆ ಕೋರ್ಟ್ ತರಾಟೆ!
ನಮ್ಮ ರಾಜ್ಯದಲ್ಲಿ 4,998 ರೂಪಾಯಿ, ನೆರಹೊರೆಯ ರಾಜ್ಯಗಳಲ್ಲಿ 900 ರೂಪಾಯಿ ಮಾತ್ರ ಸ್ಮಾರ್ಟ್ ಮೀಟರ್‌ಗೆ ವಿಧಿಸಳಾಗುತ್ತಿದೆ ಎಂದು ವಾದಿಸಲಾಗಿದೆ. ಅದು ಸಂಪೂರ್ಣವಾಗಿ ತಪ್ಪಾಗಿ ಮಾಹಿತಿ. ಎಲೆಕ್ಟ್ರೋಸ್ಟ್ಯಾಟಿಕ್ ಮೀಟರ್‌ಗೆ 950 ರೂಪಾಯಿ ಆಗುತ್ತಿದೆ. ಹೀಗಿರುವಾಗ ಸ್ಮಾರ್ಟ್ ಮೀಟರ್ ಹೇಗೆ 900 ರೂಪಾಯಿಗೆ ಬರುತ್ತದೆ? ಅರ್ಜಿದಾರರ ಮೆಮೊದಿಂದಲೇ ಆ ದರವನ್ನು ತೆಗೆದು ತೋರಿಸಲಾಗುತ್ತಿದೆ. ಆರ್‌ಡಿಎಸ್‌ಎಸ್ ಯೋಜನೆಯಡಿ 900 ರೂಪಾಯಿ ಸಬ್ಸಿಡಿ ನೀಡಲಾಗುತ್ತಿದೆ ಎಂದು ರಾಜಶ್ರೀ ಎಲೆಕ್ಟ್ರಿಕಲ್ಸ್ ಪರ ವಾದಿಸಿದ ಹಿರಿಯ ವಕೀಲ ಫಣೀಂದ್ರ ಹೇಳಿದ್ರು.
ಹಾಗಾದರೆ ಇಡೀ ದೇಶದಲ್ಲಿ 900 ರೂಪಾಯಿಗೆ ಸ್ಮಾರ್ಟ್ ಮೀಟರ್ ನೀಡಲಾಗುವುದಿಲ್ಲ ಎಂದು ಪೀಠ ಹೇಳಿತು. ‘ಸ್ಮಾರ್ಟ್ ಮೀಟರ್ ಸಿಮ್ ಸಹಾಯದಿಂದ ಕೆಲಸ ಮಾಡುತ್ತದೆ. ಸಿಗ್ನಲ್ ಇಲ್ಲದಿದ್ದರೂ ಕೆಲಸ ಮಾಡುವ ತಂತ್ರಜ್ಞಾನವನ್ನು ಅಳವಡಿಸಿ ಸ್ಮಾರ್ಟ್ ಮೀಟರ್ ತಯಾರಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಮಾತ್ರ ಸ್ಮಾರ್ಟ್ ಮೀಟರ್ನ್ನು ರಾಜಶ್ರೀ ಪೂರೈಸುತ್ತಿದೆ. ರಾಜ್ಯದ ಎಲ್ಲಾ ಕಡೆ ಸಾಫ್ಟ್‌ವೇರ್ ನೆರವು ಮಾತ್ರ ನೀಡಲಿದೆ. ಅರ್ಜಿದಾರರಿಗೆ ಅಧಿಕಾರ ಸ್ಥಾನ ಇಲ್ಲ ಎಂದು ರಾಜಶ್ರೀ ಎಲೆಕ್ಟ್ರಿಕಲ್ಸ್ ಪರ ವಾದಿಸಿದ ಹಿರಿಯ ವಕೀಲ ಫಣೀಂದ್ರ ಹೇಳಿದ್ರು.
ಇದನ್ನೂ ಓದಿ: ‘ಸ್ಮಾರ್ಟ್’ ಆಗಿ ಕಮಿಷನ್ ಹೊಡೆಯೋಕೆ ಸರ್ಕಾರ ಹೊಸ ಪ್ಲ್ಯಾನ್: ಬಸವರಾಜ್ ಬೊಮ್ಮಾಯಿ
ಆಗ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ ಎಂದು ಹಿರಿಯ ವಕೀಲೆ ಲಕ್ಷ್ಮಿ ಐಯ್ಯಂಗಾರ್ ವ್ಯಂಗ್ಯವಾಡಿದ್ರು. ಸ್ಮಾರ್ಟ್ ಮೀಟರ್ ಅನ್ನು ಕಡ್ಡಾಯಗೊಲಿಸುವುದು ಕೆಇಆರ್‌ಸಿ ಮಾರ್ಗಸೂಚಿಗೆ ವಿರುದ್ಧ ಎಂಬುದು ನಮ್ಮ ವಾದ. ಗ್ರಾಹಕರಿಗೆ 900 ರೂಪಾಯಿ ತಗುಲುತ್ತದೆ ಎಂದು ನಾವು ಹೇಳಿದ್ದೇವೆಯೇ ವಿನಃ ಸ್ಮಾರ್ಟ್ ಮೀಟರ್‌ಗೆ ರೂಪಾಯಿ ಆಗುತ್ತದೆ ಎಂದು ಹೇಳಿಲ್ಲ ಎಂದು ಪ್ರಭುಲಿಂಗ ನಾವದಗಿ ಹೇಳಿದ್ರು. ವಾದ-ಪ್ರತಿವಾದ ಆಲಿಸಿದ ಪೀಠವು ಆದೇಶ ಕಾಯ್ದಿರಿಸಿದೆ.