ಹಾಸನ : ಪ್ರಸಿದ್ಧ ಶಕ್ತಿ ದೇವತೆ ಹಾಸನಾಂಬೆಯ ದೇವಿಯ ನೇರ ದರ್ಶನ ಪಡೆಯಲು ಮೀಸಲಿದ್ದ 1,000 ರೂಪಾಯಿ ಮೊತ್ತದ ಟಿಕೆಟ್ಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ತಾತ್ಕಾಲಿಕವಾಗಿ ಇದೀಗ ರದ್ದುಗೊಳಿಸಿದ್ದಾರೆ.
ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು, ನೂಕು ನುಗ್ಗಲು ಉಂಟಾಗುತ್ತಿದೆ. ದುಡ್ಡು ಕೊಟ್ಟು ವಿಐಪಿ ಟಿಕೆಟ್ ಪಡೆಯುವವರಿಗೆ ನೇರ ದರ್ಶನ ನೀಡಿದರೆ, ಬೆಳಗ್ಗೆಯಿಂದ ಸಾಮಾನ್ಯ ಸಾಲಿನಲ್ಲಿ ನಿಂತ ನಾವು ಯಾವಾಗ ದೇವಿಯ ದರ್ಶನ ಪಡೆಯಬೇಕು ಎಂದು ಭಕ್ತರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.
ಈ ಕಾರಣಕ್ಕೆ ವಿವಿಐಪಿ ಟಿಕೆಟ್ಗಳನ್ನು ಅಧಿಕಾರಿಗಳು ರದ್ದು ಮಾಡಿದ್ದಾರೆ. ಇನ್ನು ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸವೂ ಪಡುತ್ತಿದ್ದಾರೆ. ಅತ್ತ ಶಾಸಕ ಹೆಚ್.ಡಿ.ರೇವಣ್ಣ ದಂಪತಿ ಇದೀಗ ದೇವಿಯ ದರ್ಶನ ಪಡೆದು ಬಂದಿದ್ದು, ಅವರೂ ಪಡೆದ 9 ವಿಐಪಿ ಟಿಕೆಟ್ಗಳನ್ನೂ ಅಧಿಕಾರಿಗಳು ರದ್ದು ಮಾಡಿದ್ದಾರೆ.