ಬೆಂಗಳೂರು/ಹಾಸನ : ಶಕ್ತಿ ದೇವತೆ ಹಾಸನಾಂಬೆಯ ಜಾತ್ರೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ನಿಯೋಜಿಸಿದ್ದ 500 ಸಾರಿಗೆ ಬಸ್‌ಗಳನ್ನು ರದ್ದುಪಡಿಸಿದೆ ಎಂಬ ಮಾಹಿತಿ ತಿಳಿದುಬಂದಿದೆ.
ದೇವಸ್ಥಾನದಲ್ಲಿ ಒಂದೆಡೆ ಭಕ್ತರ ನೂಕೂನುಗ್ಗಲು, ವಿಐಪಿ, ವಿವಿಐಪಿ ಟಿಕೆಟ್ ಗದ್ದಲದ ನಡುವೆಯೇ ಇದೀಗ ವಿವಿಧ ಜಿಲ್ಲೆಗಳಿಂದ ಹಾಸನ ದೇವಸ್ಥಾನಕ್ಕೆ ತೆರಳಲು ನಿಯೋಜಿಸಿದ್ದ 500 ಬಸ್‌ಗಳನ್ನು ಸರ್ಕಾರ ಹಿಂಪಡೆದಿದೆ ಎಂದು ಜೆಡಿಎಸ್ ಆರೋಪಿಸಿದೆ.
ಏಕಾಏಕಿ 500 ಬಸ್‌ಗಳನ್ನು ಸರ್ಕಾರ ಹಿಂಪಡೆದಿದೆ ಹಾಗೂ ಎಲ್ಲಾ ರೀತಿಯ ಪಾಸ್‌ಗಳನ್ನು ರದ್ದು ಪಡಿಸಿರುವುದು ಭಕ್ತರನ್ನು ಮತ್ತಷ್ಟು ಕೆರಳಿಸಿದೆ. ಐದಾರು ಗಂಟೆಗಟ್ಟಲೇ ನಿಂತರೂ ಹಸನಾಂಬೆಯ ದರ್ಶನ ಸಿಗುತ್ತಿಲ್ಲ. ಧರ್ಮದರ್ಶನ ಸಾಲಿನಲ್ಲಿ ನಿಲ್ಲುವವರಿಗಿಂತ, ವಿವಿಐಪಿ ಪಾಸ್ ಹಿಡಿದು ನಿಲ್ಲುವವರ ಸಂಖ್ಯೆಯೇ ಜಾಸ್ತಿಯಾಗಿದೆ ಎಂದು ಜೆಡಿಎಸ್ ಗುಡುಗಿದೆ.