Monday, June 15, 2026
Homeಕ್ರೈಂBREAKING NEWS : ಪಾಪಿ ಪಾಕ್‌ನಿಂದ ಡ್ರೋನ್‌ ದಾಳಿ : ಫಿರೋಜ್‌ಪುರದ ಕುಟುಂಬ ಸದಸ್ಯರ ಸ್ಥಿತಿ...

BREAKING NEWS : ಪಾಪಿ ಪಾಕ್‌ನಿಂದ ಡ್ರೋನ್‌ ದಾಳಿ : ಫಿರೋಜ್‌ಪುರದ ಕುಟುಂಬ ಸದಸ್ಯರ ಸ್ಥಿತಿ ಗಂಭೀರ

ಜಮ್ಮು ಕಾಶ್ಮೀರ: ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಡ್ರೋನ್‌ ಹಾಗೂ ಶೆಲ್‌ ದಾಳಿ ಮುಂದುವರೆಸಿದೆ

ಜಮ್ಮುವಿನ ಫಿರೋಜ್‌ಪುರ ಗ್ರಾಮದಲ್ಲಿನ ಮನೆಯೊಂದಕ್ಕೆ ಡ್ರೋನ್‌ ಅಪ್ಪಳಿಸಿದ ಪರಿಣಾಮ ಮನೆಯಲ್ಲಿ ವಾಸವಿದ್ದ ಕುಟುಂಬದ ಸದಸ್ಯರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಸ್ಥಳೀಯರು gಆಯಗೊಂಡ ಮೂವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಮಹಿಳೆಯ ಪರಿಸ್ಥಿತಿ ಚಿಂತಾಜನಕವಾಗಿದ್ದು, ಉಳಿದ ಇಬ್ಬರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನವು ಜಮ್ಮು ಕಾಶ್ಮೀರದ ಸಾಂಬಾ ಸೆಕ್ಟರ್ ಮತ್ತು ಪಠಾಣ್​​ ಕೋಟ್,ಉದ್ದಂಪುರ, ಸೇರಿದಂತೆ ಹಲವೆಡೆ ರಾತ್ರಿ ಸುಮಾರು 8:50ರ ವೇಳೆಗೆ ಡ್ರೋನ್ ದಾಳಿಗೆ ಯತ್ನಿಸಿದ್ದು, ಭಾರತದ ಭದ್ರತಾ ಪಡೆ ಅವುಗಳನ್ನು ಹೊಡೆದುರುಳಿಸಿದೆ.

ಪಾಕ್ ನಿಂದ ಮತ್ತೆ ಕದನವಿರಾಮ ಉಲ್ಲಂಘನೆಯಾಗಿದ್ದು, ಸುಮಾರು ನಾಲ್ಕು ಡ್ರೋನ್​​ಗಳನ್ನು ಭಾರತ ಸೇನೆ ಹೊಸಕಿಹಾಕಿದೆ ಎಂದು ತಿಳಿದುಬಂದಿದೆ. ಸದ್ಯ ಸ್ಥಳದಲ್ಲಿ ಸಂಪೂರ್ಣ ಬ್ಯ್ಲಾಕ್ ಔಟ್ ಜಾರಿಗೊಳಿಸಲಾಗಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!