Thursday, July 16, 2026
Homeಕ್ರೀಡೆBREAKING: ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೊ ಕೇಸ್‌, ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್

BREAKING: ವಚನಾನಂದ ಸ್ವಾಮೀಜಿ ವಿರುದ್ಧದ ಪೋಕ್ಸೊ ಕೇಸ್‌, ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್

ದಾವಣಗೆರೆ: ವಚನಾನಂದ ಸ್ವಾಮೀಜಿ ವಿರುದ್ಧ ದಾಖಲಾಗಿರುವ ಪೋಕ್ಸೊ (POCSO) ಪ್ರಕರಣದ ನಿಯಮಿತ ಜಾಮೀನು (Regular Bail) ಅರ್ಜಿಯ ಮೇಲಿನ ಆದೇಶವನ್ನು ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯವು ಇದೇ ಜುಲೈ 13ಕ್ಕೆ ಕಾಯ್ದಿರಿಸಿದೆ.

ಶ್ರೀಗಳಿಗೆ ನಿಯಮಿತ ಜಾಮೀನು ಮಂಜೂರು ಮಾಡಬೇಕೋ ಅಥವಾ ಬೇಡವೋ ಎಂಬ ವಿಷಯದ ಕುರಿತು ನ್ಯಾಯಾಲಯದಲ್ಲಿ ಎರಡೂ ಕಡೆಯಿಂದ ಸುದೀರ್ಘ ವಾದ-ಪ್ರತಿವಾದಗಳು ನಡೆದವು. ಸಂತ್ರಸ್ತ ಬಾಲಕನ ಪರವಾಗಿ ಹಿರಿಯ ವಕೀಲ ರಮೇಶ್ ಕಲಾಲ್ ಅವರು ನ್ಯಾಯಪೀಠದ ಮುಂದೆ ಹಾಜರಾಗಿ, ಪ್ರಕರಣದ ಗಾಂಭೀರ್ಯತೆಯನ್ನು ಮನವರಿಕೆ ಮಾಡಿಕೊಡುವ ಮೂಲಕ ಶ್ರೀಗಳಿಗೆ ಜಾಮೀನು ನೀಡಬಾರದು ಎಂದು ಬಲವಾದ ವಾದ ಮಂಡಿಸಿದರು.

ಮತ್ತೊಂದೆಡೆ, ಆರೋಪಿ ಸ್ಥಾನದಲ್ಲಿರುವ ವಚನಾನಂದ ಸ್ವಾಮೀಜಿ ಪರವಾಗಿ ವಕೀಲರಾದ ಎಸ್.ವಿ. ಪಾಟೀಲ್ ಅವರು ನ್ಯಾಯಾಲಯಕ್ಕೆ ಹಲವು ತಾರ್ಕಿಕ ಪ್ರತಿವಾದಗಳನ್ನು ಮಂಡಿಸಿ ಜಾಮೀನು ನೀಡುವಂತೆ ವಿನಂತಿಸಿದರು.

ಎರಡೂ ಕಡೆಯ ವಕೀಲರ ಸುದೀರ್ಘ ವಾದ ಹಾಗೂ ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶರು, ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ ಬೇಲ್ ಅರ್ಜಿಯ ಅಂತಿಮ ಆದೇಶವನ್ನು ಕಾಯ್ದಿರಿಸಿದರು. ಜುಲೈ 13ರಂದು ನ್ಯಾಯಾಲಯವು ತನ್ನ ಅಂತಿಮ ಆದೇಶವನ್ನು ಪ್ರಕಟಿಸುವುದಾಗಿ ತಿಳಿಸಿದೆ. ಸಂಚಲನ ಮೂಡಿಸಿರುವ ಈ ಪ್ರಕರಣದಲ್ಲಿ ಕೋರ್ಟ್ ನೀಡಲಿರುವ ಆದೇಶ ಪಂಚಮಸಾಲಿ ಪೀಠ ಹಾಗೂ ವಚನಾನಂದ ಶ್ರೀಗಳ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿದ್ದು, ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: ಬಾಲಕರನ್ನೂ ಬಿಟ್ಟಿಲ್ಲವೇ? ವಚನಾನಂದ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ವೇಳೆ ಕೋರ್ಟ್‌ ಗರಂ!

ಹೆಚ್ಚಿನ ಸುದ್ದಿ

Change Language »
error: Content is protected !!