ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಕಳೆದ ತಿಂಗಳು ಪ್ಲ್ಯಾಸ್ಟಿಕ್ ಮ್ಯಾಟ್ ಅಂಗಡಿಗೆ ಬೆಂಕಿ ಬಿದ್ದ ಕಾರಣ ಭಾರೀ ಅನಾಹುವಾಗಿತ್ತು. ಇದೀಗ ಅದಾಗಿ ಕೆಲವೇ ದಿನಗಳಲ್ಲಿ ಮತ್ತೊಂದು ಅಗ್ನಿ ಅವಘಡ (Fire Mishap) ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ಆಗಿ ಮನೆಗೆ ಬೆಂಕಿ ಬಿದ್ದಿದ್ದು, ಅದರ ಪರಿಣಾಮವಾಗಿ ಮಗುವೊಂದು ಸಾವನ್ನಪ್ಪಿರುವ ಘಟನೆ (Breaking) ನಡೆದಿದೆ.
18 ತಿಂಗಳ ಮಗು ಸಾವು
ಬೆಂಗಳೂರಿನ ಸ್ಯಾಂಕಿ ರಸ್ತೆಯ ಸಮ್ಮಿಟ್ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ನೇಪಾಳ ಮೂಲದ ದಂಪತಿಯ 18 ತಿಂಗಳ ಮಗು ಅನು ಸಾವಿಗೀಡಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪುಷ್ಕರ್ ಕುಮಾರ್-ಜ್ಯೋತಿ ಕುಮಾರಿ ದಂಪತಿಯ ಪುತ್ರಿ ಈ ಅಗ್ನಿ ಅವಗಢದಲ್ಲಿ ಸಿಕ್ಕು ಜೀವ ಕಳೆದುಕೊಂಡಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ.
ಪ್ಲಾಸ್ಟಿಕ್ ಮ್ಯಾಟ್ ಅಂಗಡಿಗೆ ಹೊತ್ತಿಕೊಂಡಿದ್ದ ಬೆಂಕಿ
ಬೆಂಗಳೂರಿನ ನಗರತ್ ಪೇಟೆಯಲ್ಲಿರುವ ಪ್ಲ್ಯಾಸ್ಟಿಕ್ ಮ್ಯಾಟ್ ಮಳಿಗೆಯಲ್ಲಿ ಈ ದುರಂತ ಸಂಭವಿಸಿದೆ. ರಾತ್ರಿ 3 ಘಂಟೆಯ ಸುಮಾರಿಗೆ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು.
ಸಿಲಿಂಡರ್ ಸ್ಫೋಟಗೊಂಡು ಓರ್ವ ಬಾಲಕ ಬಲಿ
ಪ್ಲ್ಯಾಸ್ಟಿಕ್ ಮ್ಯಾಟ್ ಮಳಿಗೆ ಅವಗಢ ನಡೆಯುವ ಹಿಂದಿನ ದಿನವಷ್ಟೇ,ಬೆಂಗಳೂರಿನ ವಿಲ್ಸನ್ ಗಾರ್ಡನ್‌ನ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಬಾಲಕ ಜೀವ ಕಳೆದುಕೊಂಡಿದ್ದರು. ಅಲ್ಲದೇ, ಈ ಘಟನೆಯಲ್ಲಿ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.
ಬೆಳ್ಳಂ ಬೆಳಗ್ಗೆ ಸಂಭವಿಸಿದ ನಿಗೂಢ ಸ್ಫೋಟದ ಸದ್ದಿಗೆ ವಿಲ್ಸನ್ ಗಾರ್ಡನ್ ಜನರು ಬೆಚ್ಚಿಬಿದ್ದಿದ್ದರು. 8 ಮನೆಗಳ ಮೇಲಿನ ಶೀಟ್ಗಳು ಹಾರಿದ್ದು, ಗೋಡೆಗಳು ಛಿದ್ರ, ಛಿದ್ರವಾಗಿದೆ. ಆಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗಾಯಾಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿತ್ತು.
ಚಿನ್ನಯ್ಯಪಾಳ್ಯದ ಮನೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ನಿಖರ ಕಾರಣ ಸದ್ಯಕ್ಕೆ ಕಂಡುಬಂದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ತಿಳಿಸಿದ್ದರು. ಆದರೆ ನಂತರ ನಡೆದ ತನಿಖೆಯಲ್ಲಿ ಕಾರಣ ತಿಳಿದು ಬಂದಿತ್ತು. ಮನೆಯೊಂದರಲ್ಲಿ ಉಂಟಾದ ಸ್ಪೋಟದಿಂದಾಗಿ ಒಬ್ಬ ಬಾಲಕ ಮೃತಪಟ್ಟು, ಒಂಭತ್ತು ಮಂದಿ ಗಾಯಗೊಂಡಿದ್ದು ಮಹಿಳೆಯೊಬ್ಬರ ಸ್ಥಿತಿ ಗಂಭೀರವಾಗಿತ್ತು. ಆದ್ರೆ ದುರದೃಷ್ಟ ಎಂಬಂತೆ ಗಂಭೀರವಾಗಿ ಗಾಯಗೊಂಡಿದ್ದ ಮತ್ತೋರ್ವ ಬಾಲಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಳು.
ಈ ಸ್ಫೋಟ ಸಂಭವಿಸಿದ ವೇಳೆ ಮೊದಲ ಮಹಡಿಯಲ್ಲಿದ್ದ ಮಹಿಳೆ ಕಸ್ತೂರಿ,9 ವರ್ಷದ ಬಾಲಕಿಗೆ ಗಂಭೀರ ಗಾಯವಾಗಿದ್ದು, ಸರಸಮ್ಮ (50) ಎಂಬಾಕೆಗೆ ತಲೆಗೆ ತೀವ್ರ ಪೆಟ್ಟಾಗಿತ್ತು.
ಈ ಸ್ಪೋಟದ ರಭಸಕ್ಕೆ ಮೊದಲನೆ ಮಹಡಿ ಮನೆ ಗೋಡೆ ಛಾವಣಿ ಕುಸಿದು ಬಿದ್ದು ಭಾರೀ ಹಾನಿ ಸಂಭವಿಸಿತ್ತು. ಈ ವೇಳೆ ಸಬ್ರಿನ್ ಬಾನು (35),ಮುಬಾರಕ್ (10) ಪಾತೀಮಾ (8) ಸೇರಿ ಒಟ್ಟಾರೆ ಏಳು ಮಂದಿಗೆ ಗಾಯಗಳಾಗಿತ್ತು.
ಇದನ್ನೂ ಓದಿ: ಇದ್ದಕ್ಕಿದ್ದಂತೆ ಬೆಂಕಿಗೆ ಆಹುತಿಯಾದ ಬೈಕ್ – ಪೊಲೀಸರ ಕಣ್ಣೆದುರೇ ಸಂಪೂರ್ಣ ಸುಟ್ಟು ಭಸ್ಮ