Wednesday, February 19, 2025
Homeಟಾಪ್ ನ್ಯೂಸ್BREAKING NEWS : ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಕಾರ್‌ ಮೇಲೆ ಅಟ್ಯಾಕ್! - VIDEO

BREAKING NEWS : ದೆಹಲಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ಕಾರ್‌ ಮೇಲೆ ಅಟ್ಯಾಕ್! – VIDEO

ನವದೆಹಲಿ : ವಿಧಾನಸಭಾ ಚುನಾವಣೆ ಕಾವು ಪಡೆದುಕೊಂಡಿದ್ದು, ಇಂದು ಮನೆ ಮನೆಗೆ ಪ್ರಚಾರದಲ್ಲಿ ತೊಡಗಿದ್ದ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಬೆಂಗಾವಲು ಪಡೆಯ ವಾಹನದ ಮೇಲೆ ಕಲ್ಲು ತೂರಾಟ ನಡೆದಿದೆ ಎಂದು ತಿಳಿದುಬಂದಿದೆ.

ಕೆಲ ಬಿಜೆಪಿಯ ಕಾರ್ಯಕರ್ತರೇ ಹೀಗೇ ಮಾಡಿದ್ದಾರೆಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ. ಪ್ರಚಾರದ ವೇಳೆ ಕೇಜ್ರಿವಾಲ್ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿ ಕಾರಿನ ಮೇಲೆ ಕಲ್ಲು ಎಸೆಯಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಘಟನೆಯ ವೀಡಿಯೊವನ್ನು ಎಎಪಿ ಬಿಡುಗಡೆ ಮಾಡಿದ್ದು, ಬೆಂಗಾವಲು ಪಡೆಯ ಬಳಿ ಕೆಲ ವ್ಯಕ್ತಿಗಳು ಕಪ್ಪು ಬಾವುಟಗಳನ್ನು ಬೀಸುತ್ತಿರುವುದನ್ನು ವೀಡಿಯೊದಲ್ಲಿ ಸೆರೆಯಾಗಿದೆ. ಈ ದಾಳಿ ಪ್ರಚಾರವನ್ನು ಅಡ್ಡಿಪಡಿಸುವ ಉದ್ದೇಶಪೂರ್ವಕ ಪ್ರಯತ್ನದ ಭಾಗವಾಗಿದೆ ಎಂದು ಎಎಪಿ ಆಪಾದಿಸಿದೆ.

ಹೆಚ್ಚಿನ ಸುದ್ದಿ

error: Content is protected !!