ಬೆಂಗಳೂರು : ನಟ ದುನಿಯಾ ವಿಜಯ್ ಮತ್ತು ನಟ ಲೂಸ್ ಮಾದ (ಯೋಗಿ) ಅವರು ‘ದುನಿಯಾ’ ಸಿನಿಮಾ ನಂತರದ ಕೆಲ ವರ್ಷಗಳಲ್ಲಿ ಈ ಇಬ್ಬರ ಸಂಬಂಧಗಳು ಹಳಸು ಹೋಗಿದ್ದನ್ನು ಯೋಗಿ ಒಪ್ಪಿಕೊಂಡಿದ್ದಾರೆ.
ಸಿದ್ದಲಿಂಗು-2 ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಗಾಗ ಇಬ್ಬರ ನಡುವೆ ಕಿರಿಕ್ ಆಗಿದ್ದು ನಿಜ ಎಂದಿರುವ ಯೋಗಿ, ಈಗ ನಾವಿಬ್ಬರೂ ಚೆನ್ನಾಗಿದ್ದೇವೆ. ಹಿಂದೊಮ್ಮೆ ಗಲಾಟೆಯಾಗಿತ್ತು. ನಾವೆಲ್ಲಾ ಒಂದೇ ಕುಟುಂಬದವರು. ಭೀಮ ಸಿನಿಮಾದಲ್ಲಿ ನಾನೂ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ವಿಜಯ್ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ವೈಮನಸ್ಸು ಇದ್ದದ್ದು ನಿಜ. ಯೋಗಿಯನ್ನು ಚಿಕ್ಕಮಗುವಿನಿಂದ ನಾನು ನೋಡಿಕೊಂಡು ಬಂದಿದ್ದೇನೆ. ಅವನನ್ನು ಎತ್ತಿ ಆಡಿಸಿ ಬೆಳೆಸಿದ್ದೇನೆ. ಅವನು ನನ್ನ ಸ್ವಂತ ಅಕ್ಕನ ಮಗ. ಈಗ ಇಬ್ಬರು ಚೆನ್ನಾಗಿದ್ದೇವೆ.
ಸಣ್ಣ ವಿಚಾರಕ್ಕೆ ವೈಮನಸ್ಸುಂಟಾಗಿದ್ದು ಹೌದು… ಮುಂದೆ ಇಬ್ಬರು ಸೇರಿ ಸಿನಿಮಾ ಮಾಡುತ್ತೇವೆ. ಏನೋ ಸೋಷಿಯಲ್ ಮೀಡಿಯಾದಲ್ಲಿ ಗಲಾಟೆಯಾಗಿದೆ ಅಂತಾ ಹೆಚ್ಚಾಗಿ ಬಿಂಬಿಸಲಾಗಿತ್ತು. ಅಷ್ಟಾಗಿ ಏನು ಗಲಾಟೆ ನಡೆದಿಲ್ಲ ಎಂದು ಹೇಳಿದರು.