Wednesday, February 19, 2025
Homeಟಾಪ್ ನ್ಯೂಸ್BREAKING : ಸಿಟಿ ರವಿ ಅವಾಚ್ಯ ಪದ ಬಳಕೆ ಕೇಸ್, ವಾಯ್ಸ್ ಸ್ಯಾಂಪಲ್ ನೀಡಲಿ-ಕೋರ್ಟ್​​​​ ಖಡಕ್...

BREAKING : ಸಿಟಿ ರವಿ ಅವಾಚ್ಯ ಪದ ಬಳಕೆ ಕೇಸ್, ವಾಯ್ಸ್ ಸ್ಯಾಂಪಲ್ ನೀಡಲಿ-ಕೋರ್ಟ್​​​​ ಖಡಕ್ ಸೂಚನೆ

ಬೆಂಗಳೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ವಿರುದ್ಧ ಬಿಜೆಪಿಯ ಎಂಎಲ್​​​ಸಿ ಸಿಟಿ ರವಿ ಅವರು ಪರಿಷತ್​​​​ನಲ್ಲಿ ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಪ್ರಕರಣ ಸಂಬಂಧ ರವಿ ಅವರಿಗೆ ಭಾರೀ ಸಂಕಷ್ಟ ಎದುರಾಗಿದೆ.

ರವಿ ಅವರು ತಮ್ಮ ಧ್ವನಿ ಮಾದರಿ ನೀಡಲು ನಿರಾಕರಿಸುತ್ತಿದ್ದು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿ ಹೈಕೋರ್ಟ್​​​ಗೆ ಸಿಐಡಿ ಅಧಿಕಾರಿಗಳು ಅರ್ಜಿ ಸಲ್ಲಿಸಿರುವ ಕುರಿತು ವಿಚಾರಣೆ ನಡೆಸಿರುವ ಕೋರ್ಟ್​​​, ರವಿ ಅವರಿಗೆ ಇಂದೇ ಕೋರ್ಟ್​​ ಸೂಚನೆಯನ್ನು ತಲುಪಿಸಿ. ಇಂದೇ ವಾಯ್ಸ್​​​​​​​ ಮಾದರಿ ಕೊಡಬೇಕು ಎಂದು ರವಿ ಅವರ ಪರ ವಕೀಲರಿಗೆ ಜಡ್ಜ್​​​ ಆದೇಶ ನೀಡಿದ್ದಾರೆ.

ವಾಯ್ಸ್​​ ಸ್ಯಾಂಪಲ್​​​​​ ನೀಡುವಂತೆ ಈಗಾಗಲೇ ಸಿಐಡಿ ಅಧಿಕಾರಿಗಳು ಎರಡು ಬಾರಿ ಸಿ.ಟಿ.ರವಿ ಅವರಿಗೆ ನೋಟಿಸ್​ ನೀಡಿತ್ತು ಎಂದು ತಿಳಿದುಬಂದಿದೆ. ಇನ್ನು ಪರಿಷತ್​​ನಲ್ಲಿ ಸಿಟಿ ರವಿ ಒಮ್ಮೆ ಅವಾಚ್ಯ ಶಬ್ದ ಬಳಸಿರುವುದು ವಿಡಿಯೋದಲ್ಲಿ ದೃಢವಾಗಿದೆ ಎಂದು ಸಿಐಡಿಯ ಪ್ರಾಥಮಿಕ ತನಿಖೆಯಲ್ಲಿ ದೃಢವಾಗಿದೆ ಎನ್ನಲಾಗಿದೆ.

ಹೆಚ್ಚಿನ ಸುದ್ದಿ

error: Content is protected !!