Wednesday, February 19, 2025
Homeಟಾಪ್ ನ್ಯೂಸ್BREAKING : ಕಿಕ್​ ಬ್ಯಾಕ್ ಪಡೆದ ಆರೋಪ, ಸಿಎಂಗೆ ಬಿಗ್ ರಿಲೀಫ್ ನೀಡಿದ ಕೋರ್ಟ್​

BREAKING : ಕಿಕ್​ ಬ್ಯಾಕ್ ಪಡೆದ ಆರೋಪ, ಸಿಎಂಗೆ ಬಿಗ್ ರಿಲೀಫ್ ನೀಡಿದ ಕೋರ್ಟ್​

ಬೆಂಗಳೂರು : ಟರ್ಫ್​​ ಕ್ಲಬ್ ಸ್ಟೀವರ್ಡ್​​​ ಹುದ್ದೆಗೆ ಕಿಕ್​​ ಬ್ಯಾಕ್ ಪಡೆದ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಪ್ರಕರಣದ ತನಿಖೆ ನಡೆಸಿದ್ದ ಲೋಕಾಯುಕ್ತ, ಸಿದ್ದರಾಮಯ್ಯ ಅವರು ಹಣ ಪಡೆದಿಲ್ಲ ಎಂದು ‘ಬಿ’ ರಿಪೋರ್ಟ್​​ ಸಲ್ಲಿಸಿದ್ದನ್ನು ಕೋರ್ಟ್​ ಅಂಗೀಕರಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​​ ಈ ಪ್ರಕರಣದಲ್ಲಿ ರಿಲೀಫ್ ನೀಡಿದೆ.

ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಎನ್​​​​ಆರ್ ರಮೇಶ್ ಅವರು ಈ ಹಿಂದೆ ಕೋರ್ಟ್​​ಗೆ ಖಾಸಗಿ ದೂರು ನೀಡಿದ್ದರು.

ಸಿದ್ದರಾಮಯ್ಯ ಅವರು ಈ ಮೊದಲು ಸಿಎಂ ಆಗಿದ್ದಾಗ ರೂ.1.30 ಕೋಟಿ ಹಣ ಪಡೆದು 2014ರಲ್ಲಿ ಟರ್ಫ್​​​ ಸ್ಟೀವರ್ಡ್​​​​ ಹುದ್ದೆಗೆ ವಿವೇಕಾನಂದ ಎಂಬುವವರನ್ನು ನೇಮಕ ಮಾಡಿದ್ದಾರೆ ಎಂದು ಆರೋಪಿಸಿದ್ದರು. ದೂರಿನ ಅರ್ಜಿ ತಿರಸ್ಕರಿಸಿರುವ 82ನೇ ಸಿಸಿಹೆಚ್​​ ಕೋರ್ಟ್,​ ಲೋಕಾಯುಕ್ತ ಸಲ್ಲಿಸಿದ ‘ಬಿ’ ರಿಪೋರ್ಟ್​​ ಅಂಗೀಕರಿಸಿ ಆದೇಶ ಹೊರಡಿಸಿದೆ.

ಹೆಚ್ಚಿನ ಸುದ್ದಿ

error: Content is protected !!