ನವದೆಹಲಿ : ಪಾಕಿಸ್ತಾನವು ಜಮ್ಮು ನಗರದ ಮೇಲೆ ಅಪ್ರಚೋದಿತ ಶೆಲ್, ಕ್ಷಿಪಣಿ, ಡ್ರೋಣ್ ದಾಳಿ ಮುಂದುವರಿಸಿದ್ದು ಜಮ್ಮು ಸೇರಿದಂತೆ ರಾಜಸ್ಥಾನ, ಪಂಜಾಬ್ ನಲ್ಲೂ ಇದೀಗ ವಿದ್ಯುತ್ ಸಂಪೂರ್ಣ ಕಡಿತಗೊಳಿಸಿ ಬ್ಯ್ಲಾಕ್ ಔಟ್ ಗೋಷಣೆ ಮಾಡಲಾಗಿದೆ.
#WATCH | A complete blackout has been enforced in Jalandhar, Punjab pic.twitter.com/VbQFHB4en6
— ANI (@ANI) May 8, 2025
ಪಂಜಾಬ್ನ ಅಮೃತಸರ ನಗರ, ಜಲಂಧರ್ ಸೇರಿದಂತೆ ಗಡಿಗ್ರಾಮಗಳಲ್ಲೂ ವಿದ್ಯುತ್ ಕಡಿತಗೊಳಿಸಲಾಗಿದೆ. ಜೈಸಲ್ಮೇರ್ ನಲ್ಲೂ ಪಾಕ್ ದಾಳಿಗೆ ಯತ್ನಿಸುತ್ತಿದ್ದು, ಭಾರತ ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಕೊಡುತ್ತಿದೆ.
ಪಾಕಿಸ್ತಾನ ಬಹುತೇಕ ನಾಗರೀಕರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದು, ಈಗಾಗಲೇ ಭಾರತ ಪಾಕ್ನ F-16, F-17 ಸೇರಿ ಒಟ್ಟು ಮೂರು ಫೈಟರ್ ಜೆಟ್ಗಳನ್ನು ಪಾಕಿಸ್ತಾನ ವಾಯು ನೆಲೆ ಮೇಲೆಯೇ ಹೊಡೆದುರುಳಿಸಿದೆ.