Wednesday, August 19, 2026
Homeಟಾಪ್ ನ್ಯೂಸ್BREAKFAST RECIPE: ಇಡ್ಲಿ ಜೊತೆ ಅಲಸಂಡೆ ಕಾಳಿನ ವಡೆ ಎಂದಾದ್ರೂ ಟ್ರೈ ಮಾಡಿದ್ದೀರಾ?

BREAKFAST RECIPE: ಇಡ್ಲಿ ಜೊತೆ ಅಲಸಂಡೆ ಕಾಳಿನ ವಡೆ ಎಂದಾದ್ರೂ ಟ್ರೈ ಮಾಡಿದ್ದೀರಾ?

ಬೆಳಗ್ಗಿನ ಉಪಹಾರ (Breakfast Recipe) ಯಾವಾಗಲೂ ವಿಭಿನ್ನವಾಗಿದ್ದರೆ ಮನೆ ಮಂದಿಯೂ ಇಷ್ಟಪಟ್ಟು ಸವಿಯುತ್ತಾರೆ. ಹೆಚ್ಚಾಗಿ ಮನೆಯಲ್ಲಿ ಇಡ್ಲಿ ದೋಸೆ ತಯಾರಿಸುತ್ತಾರೆ. ಅದರೊಂದಿಗೆ ವಡೆ ತಯಾರಿಸಿದರೆ ಉಪಹಾರದ ಮಜವೇ ಬೇರೆ. ಯಾವಾಗಲೂ ಸಾಮಾನ್ಯ ವಡೆ ತಯಾರಿಸುವ ಬದಲು ಒಮ್ಮೆ ಈ ಅಲಸಂಡೆ ಕಾಳಿನ ವಡೆ (Black Eyed Peas Vada) ಟ್ರೈ ಮಾಡಿ. ಈ ಹೊಸ ರುಚಿ ಎಲ್ಲರಿಗೂ ಇಷ್ಟವಾಗುವುದಂತೂ ಖಂಡಿತಾ. ಬೆಂಗ್ಗಿನ ಉಪಹಾರವೇ ಏಕೆ, ಸಂಜೆಯ ಸ್ನ್ಯಾಕ್ಸ್‌ಗೂ ಇದು ಬೆಸ್ಟ್.‌

ಬೇಕಾಗುವ ಪದಾರ್ಥಗಳು:
* ಅಲಸಂಡೆ ಕಾಳು – 1 ಕಪ್ (ರಾತ್ರಿ ಪೂರ್ತಿ ನೆನೆಸಿದ್ದು)
* ಸಣ್ಣಗೆ ಹೆಚ್ಚಿದ ಶುಂಠಿ – 1 ಇಂಚು
* ಸಣ್ಣಗೆ ಹೆಚ್ಚಿದ ಹಸಿಮೆಣಸಿನಕಾಯಿ – 2
* ಸಣ್ಣಗೆ ಹೆಚ್ಚಿದ ಕರಿಬೇವು – ಸ್ವಲ್ಪ
* ಸಣ್ಣ ಹೆಚ್ಚಿದ ಈರುಳ್ಳಿ – 1
* ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಚಮಚ
* ಜೀರಿಗೆ – 1 ಚಮಚ
* ಉಪ್ಪು – ರುಚಿಗೆ ತಕ್ಕಷ್ಟು
* ಎಣ್ಣೆ – ಕರಿಯಲು ಬೇಕಾಗುವಷ್ಟು

ಮಾಡುವ ವಿಧಾನ:
* ಮೊದಲಿಗೆ 1 ಕಪ್ ಅಲಸಂಡೆ ಕಾಳನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿಡಿ. ನಂತರ ನೀರನ್ನು ಸಂಪೂರ್ಣವಾಗಿ ಸೋಸಿಕೊಳ್ಳಿ.
* ನೆನೆಸಿದ ಅಲಸಂಡೆ ಕಾಳಿನ ಜೊತೆಗೆ ಶುಂಠಿ, ಹಸಿಮೆಣಸಿನಕಾಯಿ ಮತ್ತು ಕರಿಬೇವನ್ನು ಸೇರಿಸಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ರುಬ್ಬುವಾಗ ನೀರನ್ನು ಬಳಸಬೇಡಿ.
* ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿಕೊಂಡು, ಅದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕೈಯಿಂದ ಕಲಸಿಕೊಳ್ಳಿ.
* ಒಲೆಯ ಮೇಲೆ ಬಾಣಲೆಯಲ್ಲಿ ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ ಬಿಸಿ ಮಾಡಲು ಇಡಿ.
* ಕೈಗೆ ಸ್ವಲ್ಪ ನೀರು ಸವರಿಕೊಂಡು, ಸಿದ್ಧಪಡಿಸಿದ ಮಿಶ್ರಣದಿಂದ ಸಣ್ಣ ಸಣ್ಣ ಉಂಡೆಗಳನ್ನು ತೆಗೆದುಕೊಂಡು, ಅಂಗೈಯಲ್ಲಿ ಇಟ್ಟು ವಡೆಯ ಆಕಾರದಲ್ಲಿ ತಟ್ಟಿಕೊಳ್ಳಿ.
* ಎಣ್ಣೆ ಚೆನ್ನಾಗಿ ಕಾದ ನಂತರ, ತಟ್ಟಿದ ವಡೆಗಳನ್ನು ಒಂದೊಂದಾಗಿ ಜಾಗರೂಕತೆಯಿಂದ ಎಣ್ಣೆಗೆ ಬಿಡಿ. ಉರಿಯನ್ನು ಮಧ್ಯಮ ಮಟ್ಟದಲ್ಲಿಟ್ಟುಕೊಂಡು, ವಡೆಗಳು ಎರಡು ಕಡೆ ಚಿನ್ನದ ಬಣ್ಣಕ್ಕೆ ತಿರುಗಿ ಕುರುಕುರಾಗುವವರೆಗೆ ಬೇಯಿಸಿ.
* ಬೆಂದ ವಡೆಗಳನ್ನು ಎಣ್ಣೆಯಿಂದ ತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ ಹೆಚ್ಚುವರಿ ಎಣ್ಣೆಯನ್ನು ಸೋಸಿಕೊಳ್ಳಿ.
* ಈಗ ಬಿಸಿ ಬಿಸಿಯಾದ, ಗರಿಗರಿಯಾದ ಅಲಸಂದೆ ವಡೆ ಸವಿಯಲು ಸಿದ್ಧ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್ ಜೊತೆ ಸವಿದರೆ ಇದರ ರುಚಿ ಅದ್ಭುತವಾಗಿರುತ್ತದೆ.

ಇದನ್ನೂ ಓದಿ : ಬೋರಿಂಗ್‌ ಉಪ್ಪಿಟ್ಟು ಬಿಡಿ- ಟ್ರೈ ಮಾಡಿ ಟೇಸ್ಟಿ ರವಾ ವೆಜ್‌ಟೇಬಲ್‌ ಬಾತ್

ಹೆಚ್ಚಿನ ಸುದ್ದಿ

Change Language »
error: Content is protected !!