ಇಂದಿನ ಧಾವಂತದ ಜೀವನದಲ್ಲಿ ಆರೋಗ್ಯದ ಕಡೆ ಗಮನ ಕೊಡುವುದು ತುಂಬಾ ಮುಖ್ಯವಾಗಿದೆ. ಬೆಳಗಿನ ಉಪಹಾರಕ್ಕೆ (Breakfast Recipe) ಅಥವಾ ಸಂಜೆಯ ಸ್ನ್ಯಾಕ್ಸ್‌ಗೆ ಎಣ್ಣೆಯಿಲ್ಲದ, ಹೃದಯಕ್ಕೆ ಹಿತವಾದ ಆರೋಗ್ಯಕರ ತಿಂಡಿಯನ್ನು ಹುಡುಕುತ್ತಿದ್ದರೆ, ಈ ಓಟ್ಸ್ ಸ್ಟೀಮ್ಡ್ ವಡೆ (Oats Steamed Wada) ಅತ್ಯುತ್ತಮ ಆಯ್ಕೆಯಾಗಿದೆ. ಕೇವಲ 12 ನಿಮಿಷಗಳಲ್ಲಿ ತಯಾರಿಸಬಹುದಾದ ಈ ಡಿಶ್‌ನ ಸರಳ ರೆಸಿಪಿ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
* ಓಟ್ಸ್ – 1 ಕಪ್
* ಚಿರೋಟಿ ರವೆ – 1/2 ಕಪ್
* ಕಡಲೆಹಿಟ್ಟು – 2 ಚಮಚ
* ಅಡುಗೆ ಸೋಡಾ – 1/2 ಚಮಚ
* ಉಪ್ಪು – 1/2 ಚಮಚ
* ಸಿಟ್ರಿಕ್ ಆಸಿಡ್ – 1/4 ಚಮಚ
* ಸಕ್ಕರೆ – 2 ಚಮಚ
* ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – ಅಗತ್ಯವಿರುವಷ್ಟು
* ಅಡುಗೆ ಎಣ್ಣೆ – 2 ಚಮಚ
* ಬೇಯಿಸಿದ ಮೊಳಕೆಕಾಳು – ಅಲಂಕರಿಸಲು
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಓಟ್ಸ್, ಚಿರೋಟಿ ರವೆ ಮತ್ತು ಕಡಲೆಹಿಟ್ಟನ್ನು ಒಟ್ಟಿಗೆ ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
* ಈ ಮಿಶ್ರಣಕ್ಕೆ ಅಡುಗೆ ಸೋಡಾ, ಉಪ್ಪು, ಸಿಟ್ರಿಕ್ ಆಸಿಡ್, ಸಕ್ಕರೆ ಮತ್ತು ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
* ನಂತರ ಸ್ವಲ್ಪ ನೀರು ಮತ್ತು ಎಣ್ಣೆಯನ್ನು ಸೇರಿಸಿ, ಮಿಶ್ರಣವನ್ನು ಇಡ್ಲಿ ಹಿಟ್ಟಿನ ಹದಕ್ಕೆ ಸಿದ್ಧಪಡಿಸಿಕೊಳ್ಳಿ.
* ಸಿದ್ಧಪಡಿಸಿದ ಮಿಶ್ರಣವನ್ನು ಸಣ್ಣದಾದ ಇಡ್ಲಿ ಪಾತ್ರೆ ಅಥವಾ ಸೂಕ್ತವಾದ ಅಚ್ಚುಗಳಿಗೆ ಹಾಕಿ, ಹಬೆಯಲ್ಲಿ ಸುಮಾರು 12 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.
* ಇದು ಎಣ್ಣೆಯಲ್ಲಿ ಕರಗಿಸದೆ ಕೇವಲ ಹಬೆಯಲ್ಲಿ ಬೇಯುವುದರಿಂದ ಹೃದಯದ ಆರೋಗ್ಯಕ್ಕೆ ಬಲು ಉತ್ತಮ.
ಇದನ್ನೂ ಓದಿ : ಬೆಳಗಿನ ಜಾವಕ್ಕೆ ಎನರ್ಜಿ ನೀಡುವ ಸೂಪರ್ ಡ್ರಿಂಕ್- 5 ನಿಮಿಷಗಳಲ್ಲಿ ಮಾಡಿ ರುಚಿಕರ ಕಾಫಿ ಸ್ಮೂಥಿ