ಚೆನ್ನೈ: ತಿರುಪತಿಯ ತಿರುಮಲ ದೇವಸ್ಥಾನದ ವ್ಯವಹಾರಗಳನ್ನು ನೋಡಿಕೊಳ್ಳುವ ಮಂಡಳಿಯಾದ ತಿರುಮಲ ತಿರುಪತಿ ದೇವಸ್ಥಾನಮ್ಸ್ (ಟಿಟಿಡಿ) ಚೇರ್ಮನ್ ಆಗಿ ಟಿವಿ 5 ಸುದ್ದಿ ಸಂಸ್ಥೆ ಸ್ಥಾಪಕ ಬಿಆರ್ ನಾಯ್ಡು ಆಯ್ಕೆ ಆಗಿದ್ದಾರೆ.
ತಿರುಪತಿ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂಬ ವಿವಾದದ ನಡುವೆ ಟಿಟಿಡಿ ಅಧ್ಯಕ್ಷರಾಗಿ ಬಿಆರ್ ನಾಯ್ಡು ಅವರನ್ನು ಆಂಧ್ರಪ್ರದೇಶ ಸರ್ಕಾರ ಬುಧವಾರ ನೇಮಿಸಿದೆ. ಬಿಆರ್ ನಾಯ್ಡು ಅವರು ತೆಲುಗು ಟಿವಿ ಚಾನೆಲ್ ಟಿವಿ5 ಸ್ಥಾಪಕರಾಗಿದ್ದಾರೆ.
ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಘೋಷಿಸಿದ ಹೊಸ ಟ್ರಸ್ಟ್ ಬೋರ್ಡ್‌ನಲ್ಲಿ ವಿವಿಧ ಶ್ರೇಣಿಯ ಸದಸ್ಯರನ್ನು ಒಳಗೊಂಡಿದೆ. ಮಂಡಳಿಯು ಆಂಧ್ರಪ್ರದೇಶದ ಹಲವಾರು ಶಾಸಕರನ್ನು ಒಳಗೊಂಡಿದೆ.
ಟಿಟಿಡಿ ಮಂಡಳಿಯ 24 ಸದಸ್ಯರು:
ಬಿ.ಆರ್.ನಾಯ್ಡು (ಅಧ್ಯಕ್ಷರು), ಪ್ರಶಾಂತಿ ರೆಡ್ಡಿ, ಎಂ.ಎಸ್.ರಾಜು, ಜ್ಯೋತುಲ ನೆಹರು, ಪನಬಕ ಲಕ್ಷ್ಮಿ, ಸಾಂಬಶಿವ ರಾವ್, ನರಸಿ ರೆಡ್ಡಿ, ಸದಾಶಿವ ರಾವ್ ನನ್ನಪನೇನಿ, ಮಲ್ಲೇಲ ರಾಜಶೇಖರ್ ಗೌಡ್, ಸುಚಿತ್ರಾ ಎಲ್ಲ, ಕೃಷ್ಣ ಮೂರ್ತಿ, ಜಂಗಾ ಕೃಷ್ಣಮೂರ್ತಿ, ಕೋಟೇಶ್ವರ ರಾವ್, ಬುರಗಾಪು ಆನಂದಸಾಯಿ, ಶಾಂತಾರಾಮ, ನರೇಶ್ ಕುಮಾರ್, ಸೌರಭ್ ಹೆಚ್ ಬೋರಾ, ದರ್ಶನ್ ಆರ್ ಎನ್, ನ್ಯಾಯಮೂರ್ತಿ ಎಚ್ ಎಲ್ ದತ್ತು, ಪಿ ರಾಮಮೂರ್ತಿ, ಆದಿತ್ ದೇಸಾಯಿ, ಬೂಂಗುನೂರು ಮಹೇಂದರ್ ರೆಡ್ಡಿ, ಜಾನಕಿ ದೇವಿ ತಮ್ಮಿಶೆಟ್ಟಿ ಮತ್ತು ಅನುಗೋಲು ರಂಗಶ್ರೀ.