ಗದಗ: ಇಂದು ದೇಶದಾದ್ಯಂತ ಹೋಳಿ ಹಬ್ಬದ ಸಂಭ್ರಮ ಮನೆಮಾಡಿದ್ದು, ವಯಸ್ಸಿನ ಹಂಗಿಲ್ಲದೆ ಜನರು ಬಣ್ಣದ ಓಕುಳಿಯಲ್ಲಿ ಮಿಂದೆದ್ದಿದ್ದಾರೆ. ಹೀಗೆ ಹೋಳಿ ಆಚರಣೆ ಬಳಿಕ ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ನೀರುಪಾಲಾಗಿರುವ ಘಟನೆ ಗದಗದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಲಕ್ಷೇಶ್ವರದಲ್ಲಿ ಬಣ್ಣಗಳ ಆಟ ಮುಗಿಸಿದ ಬಳಿಕ ಕೆರೆಗೆ ತೆರಳಿದ್ದ ಯುವಕ ನೀರುಪಾಲಾಗಿದ್ದಾನೆ.16 ವರ್ಷದ ಬಾಲಕ ದೇವೇಂದ್ರ ಸಾವನ್ನಪಿರುವ ಯುವಕ.ಈಜು ಬಾರದೆ ಜೋಶ್ ನಲ್ಲಿ ಯುವಕ ಕೆರೆಗೆ ಇಳಿದಿದ್ದೇ ಈ ಘಟನೆಗೆ ಕಾರಣ ಎನ್ನಲಾಗಿದೆ.
ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಕುರಿತು ಲಕ್ಷ್ಮೀಶ್ವರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.