Sunday, November 10, 2024
Homeಟಾಪ್ ನ್ಯೂಸ್ಐ ಫೋನ್‌ಗಾಗಿ ತನ್ನನು ತಾನೇ ಕಿಡ್ನಾಪ್ ಮಾಡಿಕೊಂಡ ಬಾಲಕ!

ಐ ಫೋನ್‌ಗಾಗಿ ತನ್ನನು ತಾನೇ ಕಿಡ್ನಾಪ್ ಮಾಡಿಕೊಂಡ ಬಾಲಕ!

ತಂದೆಯ ಬಳಿ ಹಣ ವಸೂಲಿ ಮಾಡಿ ಅದರಿಂದ ಐಫೋನ್ ಕೊಳ್ಳುವ ಕನಸು ಕಂಡಿದ್ದ ಬಾಲಕನ ಪ್ರಯತ್ನ ಪೊಲೀಸರಿಂದ ವಿಫಲವಾಗಿದೆ.

ಈ ಪ್ರಳಯಾಂತಕ ಬಾಲಕನ ಸನ್ನಿವೇಶ ನಡೆದಿರುವುದು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ.
ತಂದೆ ಸಣ್ಣದೊಂದು ಜವಳಿ ಅಂಗಡಿಯ ಮಾಲಿಕ. ಸಣ್ಣ ವಯಸಿನಲ್ಲೇ ಬಾಲಕ ತಾಯಿಯನ್ನು ಕಳೆದುಕೊಂಡಿದ್ದ.

ತಂದೆಯ ಆರೈಕೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ಈತನ ಐಫೋನ್ ಬೇಡಿಕೆಯನ್ನು ದುಬಾರಿ ಎಂಬ ಕಾರಣದಿಂದ ನಿರಾಕರಿಸಲಾಗಿತ್ತು.
ಹೀಗಾಗಿ ತಂದೆಯಂದು ಒಂದಷ್ಟು ಹಣ ವಸೂಲಿ ಮಾಡಲು ಬಾಲಕ ಈ ಅನಾಹುತಕಾರಿ ಯೋಜನೆ ರೂಪಿಸಿದ್ದ.

ಸ್ನೇಹಿತನ ಮೊಬೈಲ್‌ನಿಂದ ತಂದೆಗೆ ಮಗನ ಅಪಹರಣವಾಗಿದೆ ಎಂದು ಅಪಹರಣಕಾರರ ಸೋಗಿನಲ್ಲಿ ಸಂದೇಶ ಕಳಿಸಿದ್ದ. ಇದರ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಕೆಲವೇ ತಾಸಿನಲ್ಲಿ ಬಾಲಕರ ಆಟ ಬಯಲು ಮಾಡಿದ್ದಾರೆ. ಅಪ್ರಾಪ್ತ ಬಾಲಕನನ್ನು ಪೊಲೀಸರು ವಂಶಕ್ಕೆ ಪಡೆದಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!