ಭಾನುವಾರ ತಲಕಾಡಿನ ಮಾಧವ ಮಂತ್ರಿ ಅಣೆಕಟ್ಟಿನಲ್ಲಿ 16 ವರ್ಷದ ಯುವಕ ಮುಳುಗಿ ಸಾವನ್ನಪ್ಪಿದ್ದಾನೆ. ಮೃತನನ್ನ ದೀಕ್ಷಿತ್ ಎಂದು ಗುರುತಿಸಲಾಗಿದೆ ಆತ 10ನೇ ತರಗತಿ ಓದುತ್ತಿದ್ದ ಎನ್ನಲಾಗಿದೆ.
ಗೆಳೆಯರೊಂದಿಗೆ ವೈಕುಂಠ ನಾರಾಯಣಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಬಂದಿದ್ದ ಹುಡುಗರು ಕಾವೇರಿ ನದಿಯಲ್ಲಿ ಈಜಲು ನಿರ್ಧರಿಸಿದ್ದಾರೆ. ಆದರೆ, ಈಜು ಗೊತ್ತಿಲ್ಲದಿದ್ದರೂ ದೀಕ್ಷಿತ್ ಅಣೆಕಟ್ಟೆಗೆ ಹಾರಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಅಗ್ನಿಶಾಮಕ ಮತ್ತು ತುರ್ತು ಸಿಬ್ಬಂದಿ ಭಾನುವಾರ ರಾತ್ರಿಯವರೆಗೂ ಶವಕ್ಕಾಗಿ ಹುಡುಕಾಟ ನಡೆಸಿ ಶವವನ್ನು ಹೊರತೆಗೆದಿದ್ದಾರೆ.
ತಲಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.