Sunday, November 10, 2024
Homeಟಾಪ್ ನ್ಯೂಸ್ಪ್ರಧಾನಿ ಮೋದಿ, ಆದಿತ್ಯನಾಥ್ ಹತ್ಯೆಗೈಯುವ ಇಮೇಲ್: ಬಾಲಕ ವಶಕ್ಕೆ

ಪ್ರಧಾನಿ ಮೋದಿ, ಆದಿತ್ಯನಾಥ್ ಹತ್ಯೆಗೈಯುವ ಇಮೇಲ್: ಬಾಲಕ ವಶಕ್ಕೆ


ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಅವರನ್ನು ಹತ್ಯೆಗೈಯುವುದಾಗಿ ಇಮೇಲ್ ಕಳುಹಿಸಿದ್ದ ಆರೋಪದಲ್ಲಿ ಬಾಲಕನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.


ಲಕ್ನೋದ ಶಾಲೆಯೊಂದರ ವಿದ್ಯಾರ್ಥಿಯಾಗಿರುವ ಈ ಬಾಲಕ ಮಾಧ್ಯಮ ಸಂಸ್ಥೆಯೊಂದಕ್ಕೆ ಇಮೇಲ್ ಕಳುಹಿಸಿದ್ದ ಎನ್ನಲಾಗಿದೆ.
ಬಿಹಾರ ಮೂಲದ ಬಾಲಕನನ್ನು ಲಕ್ನೋದಿಂದ ವಶಕ್ಕೆ ಪಡೆಯಲಾಗಿದ್ದು ನೋಯ್ಡಾಗೆ ಕರೆತರಲಾಗಿದೆ.


ಇ-ಮೇಲ್ ಬೆದರಿಕೆಗೆ ಸಂಬಂಧಿಸಿದ ಏಪ್ರಿಲ್ 5 ರಂದು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆದಿತ್ತು. ಇ-ಮೇಲ್ ನ ಮೂಲ ಪತ್ತೆ ಹಚ್ಚಿ ಬಂದಾಗ ಲಕ್ನೋದಲ್ಲಿ ಈ ಈ ಸಂದೇಶವನ್ನು ಕಳುಹಿಸಿದ್ದು ಬಾಲಕ ಎನ್ನುವುದು ತಿಳಿದು ಬಂದಿದೆ.

ಹೆಚ್ಚಿನ ಸುದ್ದಿ

error: Content is protected !!