Saturday, May 16, 2026
Homeಟಾಪ್ ನ್ಯೂಸ್TRISHA KRISHNAN: ನಟಿ ತ್ರಿಶಾ ಮನೆಗೆ ಮತ್ತೆ ಬಾಂಬ್‌ ಬೆದರಿಕೆ

TRISHA KRISHNAN: ನಟಿ ತ್ರಿಶಾ ಮನೆಗೆ ಮತ್ತೆ ಬಾಂಬ್‌ ಬೆದರಿಕೆ

ಚೆನ್ನೈ:  ಖ್ಯಾತ ತಮಿಳು ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ಚೆನ್ನೈನ ನಿವಾಸಕ್ಕೆ ಬಾಂಬ್ ಬೆದರಿಕೆ ಬಂದಿರುವುದು ಚಿತ್ರರಂಗದಲ್ಲಿ ಭಾರಿ ಆತಂಕ ಮೂಡಿಸಿದೆ. ಸೋಮವಾರ ಬೆಳಿಗ್ಗೆ 9:30ರ ಸುಮಾರಿಗೆ ಡಿಜಿಪಿ (DGP) ಕಚೇರಿಯ ನಿಯಂತ್ರಣ ಕೊಠಡಿಗೆ ಅಪರಿಚಿತ ವ್ಯಕ್ತಿಯೊಬ್ಬ ಇಮೇಲ್ ಕಳುಹಿಸಿದ್ದು, ತ್ರಿಶಾ ಅವರ ಮನೆಯಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾನೆ. ಈ ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದಾರೆ.

ತ್ರಿಶಾ ಮನೆಯಲ್ಲಿ ಪರಿಶೀಲನೆ
ಡಿಜಿಪಿ ಕಚೇರಿಯಿಂದ ಬಂದ ಮಾಹಿತಿಯ ಮೇರೆಗೆ ತೇನಾಂಪೇಟೆ ಪೊಲೀಸರು, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳ (BDDS) ಹಾಗೂ ಶ್ವಾನ ದಳದೊಂದಿಗೆ ತ್ರಿಶಾ ಅವರ ಮನೆಗೆ ಬಂದಿದ್ದಾರೆ. ಇಡೀ ಮನೆಯನ್ನು ತಮ್ಮ ಸುಪರ್ದಿಗೆ ಪಡೆದ ಅಧಿಕಾರಿಗಳು ಗಂಟೆಗಳ ಕಾಲ ತೀವ್ರ ತಪಾಸಣೆ ನಡೆಸಿದರು. ಮನೆಯ ಪ್ರತಿ ಮೂಲೆಯನ್ನೂ ಜಾಲಾಡಿದ ನಂತರ, ಅಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ ಇದೊಂದು ಸುಳ್ಳು ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ತ್ರಿಶಾ ಅವರ ಕುಟುಂಬ ಮತ್ತು ಅಭಿಮಾನಿಗಳು ನಿಟ್ಟುಸಿರು ಬಿಡುವಂತಾಗಿದೆ.

ಮುಖ್ಯವಾದ ಸಂಗತಿಯೆಂದರೆ, ಈ ವರ್ಷದ ಆರಂಭದಲ್ಲೂ ತ್ರಿಶಾ ಅವರ ಮನೆಗೆ ಇಂತಹುದೇ ಬಾಂಬ್ ಬೆದರಿಕೆ ಬಂದಿತ್ತು. ಪದೇ ಪದೇ ಇಂತಹ ಕೃತ್ಯಗಳು ನಡೆಯುತ್ತಿರುವುದರಿಂದ ಚೆನ್ನೈ ಪೊಲೀಸರ ಸೈಬರ್ ಕ್ರೈಂ ವಿಭಾಗವು ಈ ಇಮೇಲ್ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಗಂಭೀರ ತನಿಖೆ ಆರಂಭಿಸಿದೆ. ಇತ್ತೀಚಿನ ದಿನಗಳಲ್ಲಿ ನಟ ವಿಜಯ್ ಅವರ ರಾಜಕೀಯ ಪ್ರವೇಶದ ಹಿನ್ನೆಲೆಯಲ್ಲಿ ತ್ರಿಶಾ ಅವರ ಹೆಸರು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ವೃತ್ತಿಜೀವನದ ವಿಷಯಕ್ಕೆ ಬಂದರೆ, ತ್ರಿಶಾ ಅವರು ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ ಚಿತ್ರದ ಚಿತ್ರೀಕರಣ ಮುಗಿಸಿದ್ದು, ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.

ಸಿಎಂ ಸ್ಟಾಲಿನ್ ನಿವಾಸ, ಬಿಜೆಪಿ ಕಚೇರಿಗೆ ಬಾಂಬ್‌ ಬೆದರಿಕೆ – ನಟಿ ತ್ರಿಶಾ ನಿವಾಸವನ್ನೂ ಸ್ಪೋಟಿಸುವುದಾಗಿ ವಾರ್ನಿಂಗ್‌

ಹಿಂದಿನ ವರ್ಷ ಅಕ್ಟೋಬರ್‌ ತಿಂಗಳಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್‌ ನಿವಾಸ, ಬಿಜೆಪಿ ಕಚೇರಿ, ನಟಿ ತ್ರಿಶಾ ನಿವಾಸ ಸೇರಿದಂತೆ ಹಲವೆಡೆ ದುಷ್ಕರ್ಮಿಗಳು ಬಾಂಬ್‌ ಬೆದರಿಕೆ ಹಾಕಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್‌ ಅಧಿಕಾರಿಗಳು, ಬಾಂಬ್‌ ಪತ್ತೆ ಮತ್ತು ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದರು. ದುಷ್ಟರ್ಮಿಗಳು ಇ-ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಒಡ್ಡಿದ್ದರು. ಚೆನ್ನೈ ವಿಮಾನ ನಿಲ್ದಾಣ್ಕಕ್ಕೂ ಸಹ ಬೆದರಿಕೆ ಮೇಲ್‌ ಕಳುಹಿಸಲಾಗಿತ್ತು. ಕ್ರಮೇಣ ಬಾಂಬ್‌ ಬೆದರಿಕೆ ಮೇಲ್‌ ಸಿಎಂ ನಿವಾಸ, ಬಿಜೆಪಿ ಕಚೇರಿ ಹಾಗೂ ನಟಿ ತ್ರಿಶಾ ನಿವಾಸಕ್ಕೂ ಸಹ ತಲುಪಿತ್ತು.

ಇದನ್ನೂ ಓದಿ: ವಿಜಯ್‌ ಜೊತೆಗಿನ ಸಂಬಂಧದ ಬಗ್ಗೆ ಪ್ರಶ್ನೆಗಳ ಸುರಿಮಳೆ- ನಟಿ ತ್ರಿಶಾ ರಿಯಾಕ್ಷನ್‌ ಏನು..?: VIDEO

ಹೆಚ್ಚಿನ ಸುದ್ದಿ

Change Language »
error: Content is protected !!