ಮುಂಬೈ: ಬಾಲಿವುಡ್ (Bollywood) ಬ್ಯಾಡ್ ಬಾಯ್, ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಸಲ್ಮಾನ್ ಖಾನ್ (Salman Khan) ಈಗ ಮತ್ತೆ ಮದುವೆ ವಿಚಾರವಾಗಿ ಸುದ್ದಿಯಲಿದ್ದಾರೆ. ಹೌದು, ಸಲ್ಲು ಮದುವೆ ವಿಚಾರವಾಗಿ ಆಗಾಗ ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ಮತ್ತೊಂದು ಗಾಸಿಪ್ ಸದ್ದು ಮಾಡುತ್ತಿದೆ. ನಟ ಸಲ್ಮಾನ್ ಖಾನ್ ತೋಟದ ಮನೆಯಲ್ಲಿ (Farm house) ಸಲ್ಲು ಜೊತೆಗೆ ಇರುವ ಯುವತಿ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇದನ್ನೂ ಓದಿ : ಗೋವಿಂದ ಸಂಸಾರದಲ್ಲಿ ಬಿರುಕು..? ಇದೊಂದು ಪಿತೂರಿ ಎಂದ ಬಾಲಿವುಡ್ ನಟ
ಸಲ್ಮಾನ್ ಖಾನ್ ಅವರ ಪನ್ವೇಲ್ ಫಾರ್ಮ್‌ಹೌಸ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ.ಈ ಫೋಟೋಗಳನ್ನು ನೋಡಿದ ಹಲವರು ಸಲ್ಮಾನ್ ಖಾನ್ ಮದುವಯಾದ್ರಾ..? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಹೀಗೆ ಸಲ್ಲು ಜೊತೆ ಕಾಣಿಸಿಕೊಂಡಿರುವ ಯುವತಿಯ ಹೆಸರು ಕರಿಷ್ಮಾ ಹಜಾರಿಕಾ. ಈ ಕರಿಷ್ಮಾ ಹಜಾರಿಕಾಗೆ ಸಲ್ಮಾನ್ ಖಾನ್ ಜೊತೆ ಏನು ಸಂಬಂಧ ? ಈಕೆ ಸಲ್ಲು ತೋಟದ ಮನೆಯಲ್ಲಿ ಯಾಕೆ ಕಾಣಿಸಿಕೊಳ್ಳುತ್ತಾಳೆ . ಈ ಇಬ್ಬರ ನಡುವೆ ಕೇವಲ ಸ್ನೇಹ ಮಾತ್ರನಾ ಅಥವಾ ಲಿವಿಂಗ್ ರಿಲೀಷನ್ಶಿಪ್ ನಲ್ಲಿದ್ದಾರಾ..? ಅಥವಾ ಈ ಯುವತಿಯನ್ನು ಸಲ್ಲು ಮದುವೆಯಾಗಿದ್ದಾರಾ ಎಂಬ ಚರ್ಚೆಗಳು ಜೋರಾಗಿದೆ. ಆದ್ರೆ ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.