Thursday, July 16, 2026
Homeಟಾಪ್ ನ್ಯೂಸ್RISHAB SHETTY: ರಿಷಬ್ ಶೆಟ್ಟಿಗೆ ಬರ್ತ್‌ಡೇ ಶುಭಾಶಯ ಕೋರಿ ಹೊಸ ಸಿನಿಮಾ ಸುಳಿವು ನೀಡಿದ ಬಾಲಿವುಡ್...

RISHAB SHETTY: ರಿಷಬ್ ಶೆಟ್ಟಿಗೆ ಬರ್ತ್‌ಡೇ ಶುಭಾಶಯ ಕೋರಿ ಹೊಸ ಸಿನಿಮಾ ಸುಳಿವು ನೀಡಿದ ಬಾಲಿವುಡ್ ಸ್ಟಾರ್ ವಿವೇಕ್ ಒಬೆರಾಯ್!

ಮುಂಬೈ: ಬಾಲಿವುಡ್‌ನ ಖ್ಯಾತ ನಟ ವಿವೇಕ್ ಒಬೆರಾಯ್ (Vivek Oberoi) ಅವರು ‘ಕಾಂತಾರ’ ಖ್ಯಾತಿಯ ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ (Rishab Shetty) ಅತ್ಯಂತ ವಿಶೇಷವಾಗಿ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ. ಜೊತೆಗೆ ಮುಂಬರುವ ದಿನಗಳಲ್ಲಿ ಇಬ್ಬರೂ ಒಟ್ಟಾಗಿ ಸಿನಿಮಾ ಮಾಡುವ ಬಗ್ಗೆಯೂ ದೊಡ್ಡ ಸುಳಿವು ನೀಡಿದ್ದಾರೆ.

ರಿಷಬ್‌ ಹಾಡಿ ಹೊಗಳಿದ ನಟ
ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ರಿಷಬ್ ಶೆಟ್ಟಿಯವರನ್ನು ಹಾಡಿಹೊಗಳಿರುವ ವಿವೇಕ್ ಒಬೆರಾಯ್, “ಸಿನಿಮಾ ಎಂಬುದು ಒಂದು ಕನ್ನಡಿಯಿದ್ದಂತೆ. ಆದರೆ ರಿಷಬ್ ಶೆಟ್ಟಿ ಅವರ ಸಿನಿಮಾ ನಿಜವಾದ ಮತ್ತು ಎಂದಿಗೂ ರಾಜಿ ಮಾಡಿಕೊಳ್ಳದ ಉತ್ಸಾಹದತ್ತ ಕೊಂಡೊಯ್ಯುವ ಮಹಾದ್ವಾರವಾಗಿದೆ. ರಿಷಬ್ ಮಣ್ಣು, ಬೆಂಕಿ ಹಾಗೂ ಯಾವುದೇ ಗಡಿಗಳಿಗೆ ಸೀಮಿತವಾಗದ ದೂರದೃಷ್ಟಿಯೊಂದಿಗೆ ಈ ಸಿನಿಮಾ ರಂಗದ ನಿಯಮಗಳನ್ನೇ ಬದಲಾಯಿಸಿದ್ದಾರೆ” ಎಂದು ಕೊಂಡಾಡಿದ್ದಾರೆ.

ಮುಂದುವರಿದು, “ತಾನು ಮಾಡುವ ಪ್ರತಿಯೊಂದು ಕೆಲಸಕ್ಕೂ ತನ್ನ ರಕ್ತ, ಬೆವರು ಮತ್ತು ಆತ್ಮವನ್ನು ಮುಡಿಪಾಗಿಡುವ ಓರ್ವ ಶ್ರೇಷ್ಠ ಕಲಾಕಾರನಿಗೆ ಜನ್ಮದಿನದ ಅದ್ಭುತ ಶುಭಾಶಯಗಳು. ಮುಂಬರುವ ವರ್ಷ ನಿಮಗೆ ಇನ್ನಷ್ಟು ಯಶಸ್ಸು ತರಲಿ. ನಿಮ್ಮಲ್ಲಿರುವ ದೈವಿಕ ಶಕ್ತಿಗಳು ಬೆಳ್ಳಿತೆರೆಯನ್ನು ಹೀಗೆಯೇ ಬೆಳಗುತ್ತಿರಲಿ” ಎಂದು ಹಾರೈಸಿದ್ದಾರೆ.

ಒಟ್ಟಿಗೆ ಸಿನಿಮಾ ಮಾಡೋಣ ಎಂದ ವಿವೇಕ್
ಇದೇ ಪೋಸ್ಟ್‌ನ ಕೊನೆಯಲ್ಲಿ ವಿವೇಕ್ ಒಬೆರಾಯ್ ಅವರು, “ನಾವು ಶೀಘ್ರದಲ್ಲೇ ಒಟ್ಟಾಗಿ ಸೇರಿ ಒಂದು ಅದ್ಭುತವಾದ ಸಿನಿಮಾ ಸೃಷ್ಟಿಸಲು ನಾನು ಕಾತುರದಿಂದ ಕಾಯುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ವಿವೇಕ್ ಅವರ ಈ ಕೊನೆಯ ಸಾಲುಗಳು ಇದೀಗ ಸಿನಿರಂಗದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ರಿಷಬ್ ಶೆಟ್ಟಿ ಹಾಗೂ ವಿವೇಕ್ ಒಬೆರಾಯ್ ಕಾಂಬಿನೇಷನ್‌ನಲ್ಲಿ ಹೊಸದೊಂದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಬರಲಿದೆಯೇ ಎಂಬ ಚರ್ಚೆ ಅಭಿಮಾನಿಗಳಲ್ಲಿ ಶುರುವಾಗಿದೆ.

ಇದನ್ನೂ ಓದಿ: ‘ಮಿಮಿ ಚಿತ್ರದ ವೇಳೆ ಅಂಡಾಣು ಸಂರಕ್ಷಿಸಿಟ್ಟುಕೊಂಡಿದ್ದೆ’ ಖಾಸಗಿ ಜೀವನದ ರಹಸ್ಯ ಬಿಚ್ಚಿಟ್ಟ ನಟಿ ಕೃತಿ!

ಹೆಚ್ಚಿನ ಸುದ್ದಿ

Change Language »
error: Content is protected !!