Thursday, July 16, 2026
Homeಟಾಪ್ ನ್ಯೂಸ್AAMIR KHAN: ಮೂರನೇ ಬಾರಿಗೆ ಆಮೀರ್ ಖಾನ್ ಮದುವೆ, ಬೆಂಗಳೂರಿನ ಉದ್ಯಮಿ ಗೌರಿಯೊಂದಿಗೆ ನಾಳೆಯೇ ವಿವಾಹ

AAMIR KHAN: ಮೂರನೇ ಬಾರಿಗೆ ಆಮೀರ್ ಖಾನ್ ಮದುವೆ, ಬೆಂಗಳೂರಿನ ಉದ್ಯಮಿ ಗೌರಿಯೊಂದಿಗೆ ನಾಳೆಯೇ ವಿವಾಹ

ಮುಂಬೈ: ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ (Aamir Khan ) ಅವರು ತಮ್ಮ ಬಹುಕಾಲದ ಗೆಳತಿ ಗೌರಿ ಸ್ಕ್ರಾಟ್ ಅವರೊಂದಿಗೆ ಜುಲೈ 5 ರಂದು ಭಾನುವಾರ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಸರಳವಾಗಿ ಮನೆಯಲ್ಲಿ ವಿವಾಹ
ಮುಂಬೈನಲ್ಲಿರುವ ತಮ್ಮ ನಿವಾಸದಲ್ಲೇ ಅತ್ಯಂತ ಸರಳ ಹಾಗೂ ಆಪ್ತರ ಸಮ್ಮುಖದಲ್ಲಿ ಈ ವಿವಾಹ ಮಹೋತ್ಸವ ಜರುಗಲಿದೆ ಎಂದು ಸ್ವತಃ ಆಮೀರ್ ಖಾನ್ ಅವರೇ ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಯಾವುದೇ ಅದ್ದೂರಿ ಹಂಗಾಮಿಲ್ಲದೆ, ಕೇವಲ ಎರಡೂ ಕುಟುಂಬದ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲಿದ್ದು, ಮದುವೆಯ ನಂತರ ಯಾವುದೇ ಗ್ರ್ಯಾಂಡ್ ರಿಸೆಪ್ಷನ್ ಹಮ್ಮಿಕೊಳ್ಳುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇದು ನಟ ಆಮೀರ್ ಖಾನ್ ಅವರಿಗೆ ಮೂರನೇ ಮದುವೆಯಾಗಿದ್ದು, ಈ ಹಿಂದೆ ಅವರು ರೀನಾ ದತ್ತಾ ಮತ್ತು ಕಿರಣ್ ರಾವ್ ಅವರನ್ನು ವಿವಾಹವಾಗಿ ವಿಚ್ಛೇದನ ಪಡೆದಿದ್ದರು. ಗೌರಿ ಸ್ಕ್ರಾಟ್ ಅವರಿಗೂ ಇದು ಎರಡನೇ ಮದುವೆಯಾಗಿದೆ.

ತಮ್ಮ ಬದುಕಿನ ಈ ವಿಶೇಷ ದಿನದ ಬಗ್ಗೆ ಮಾತನಾಡಿರುವ ಆಮೀರ್ ಖಾನ್, ಜುಲೈ 5 ರಂದು ತಮ್ಮ ಮನೆಯಲ್ಲೇ ಮದುವೆ ನಡೆಯುತ್ತಿದ್ದು, ಇದು ನಮಗೆ ಅತ್ಯಂತ ಪ್ರಮುಖವಾದ ದಿನವಾಗಿದೆ ಎಂದು ಹೇಳಿದ್ದಾರೆ. ತೀರಾ ಸಣ್ಣ ಮಟ್ಟದಲ್ಲಿ ಕೇವಲ ಕುಟುಂಬಸ್ಥರ ನಡುವೆ ನಡೆಯುತ್ತಿರುವ ಈ ಮದುವೆಗೆ ಅಭಿಮಾನಿಗಳು ಮತ್ತು ಮಾಧ್ಯಮಗಳ ಆಶೀರ್ವಾದ ಬೇಕು ಎಂದು ಅವರು ಕೇಳಿಕೊಂಡಿದ್ದಾರೆ. ಗೌರಿ ಮತ್ತು ತಾನು ಒಟ್ಟಾಗಿ ಆರಂಭಿಸುತ್ತಿರುವ ಬದುಕಿನ ಈ ಹೊಸ ಅಧ್ಯಾಯಕ್ಕೆ ಎಲ್ಲರ ಹಾರೈಕೆಗಳು ಬೇಕಾಗಿದ್ದು, ಮುಂದಿನ ಪಯಣ ಸುಖಕರವಾಗಿರಲಿ ಎಂದು ಪ್ರಾರ್ಥಿಸುವಂತೆ ಅವರು ಕೋರಿದ್ದಾರೆ.

ಈ ಅಪೂರ್ವ ಕ್ಷಣಕ್ಕೆ ಆಮೀರ್ ಖಾನ್ ಅವರ ಮೊದಲ ಪತ್ನಿ ರೀನಾ ದತ್ತಾ ಅವರ ಮಕ್ಕಳಾದ ನಟ ಜುನೈದ್ ಖಾನ್ ಮತ್ತು ಉದ್ಯಮಿ ಇರಾ ಖಾನ್ ಹಾಗೂ ಎರಡನೇ ಪತ್ನಿ ಕಿರಣ್ ರಾವ್ ಅವರ ಮಗ ಆಜಾದ್ ಸಾಕ್ಷಿಯಾಗಲಿದ್ದಾರೆ. ಇವರೊಂದಿಗೆ ಗೌರಿ ಸ್ಕ್ರಾಟ್ ಅವರ ಮೊದಲ ಮದುವೆಯ ಮಗ ಕೂಡ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.

ಬೆಂಗಳೂರಿನಲ್ಲಿ ಭೇಟಿಯಾಗಿದ್ದ ಜೋಡಿ
ಆಮೀರ್ ಖಾನ್ ಮತ್ತು ಗೌರಿ ಅವರ ಪರಿಚಯವಾಗಿದ್ದು ನಮ್ಮ ಬೆಂಗಳೂರಿನಲ್ಲೇ ಎಂಬುದು ಮತ್ತೊಂದು ಕುತೂಹಲಕಾರಿ ಸಂಗತಿ. ಆಮೀರ್ ಅವರ ಸೋದರಸಂಬಂಧಿ ನುಜ್ರತ್ ಖಾನ್ ಮೂಲಕ ಬೆಂಗಳೂರಿನಲ್ಲಿ ಇವರಿಬ್ಬರ ಮೊದಲ ಭೇಟಿಯಾಗಿತ್ತು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಕಳೆದ ವರ್ಷ ಮಾರ್ಚ್‌ನಲ್ಲಿ ಆಮೀರ್ ಖಾನ್ ಅವರ 60ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ತಮ್ಮ ಸಂಬಂಧವನ್ನು ಮಾಧ್ಯಮಗಳ ಮುಂದೆ ಅಧಿಕೃತವಾಗಿ ಘೋಷಿಸಿದ್ದರು. ಸದ್ಯ ಇವರಿಬ್ಬರು ಮುಂಬೈನ ಬಾಂದ್ರಾದಲ್ಲಿರುವ ಆಮೀರ್ ನಿವಾಸದಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ.

ಇದನ್ನೂ ಓದಿ: ನಡೆದಾಡಲು ಪರದಾಡಿದ ಗ್ಲಾಮರ್ ಗೊಂಬೆ ರಂಭಾ: ವೈರಲ್ ವಿಡಿಯೋ ನೋಡಿ ಫ್ಯಾನ್ಸ್‌ ಆತಂಕ

ಹೆಚ್ಚಿನ ಸುದ್ದಿ

Change Language »
error: Content is protected !!