Thursday, April 16, 2026
Homeಟಾಪ್ ನ್ಯೂಸ್BENGALURU : ಇನ್ಮುಂದೆ ಮೆಟ್ರೋ ರೈಲು, ಬಿಎಂಟಿಸಿ ಬಸ್ ‌ಗೆ ಒಂದೇ ಸ್ಮಾರ್ಟ್ ಕಾರ್ಡ್!

BENGALURU : ಇನ್ಮುಂದೆ ಮೆಟ್ರೋ ರೈಲು, ಬಿಎಂಟಿಸಿ ಬಸ್ ‌ಗೆ ಒಂದೇ ಸ್ಮಾರ್ಟ್ ಕಾರ್ಡ್!

ಬೆಂಗಳೂರು ( Bengaluru) ಪ್ರಯಾಣಿಕರ ಅನುಕೂಲಕ್ಕಾಗಿ BMTC ಮಹತ್ವದ ಹೊಸ ಹೆಜ್ಜೆ ಇಟ್ಟಿದೆ. ಇನ್ನು ಮುಂದೆ ಮೆಟ್ರೋ ರೈಲು (Namma Metro), ಬಿಎಂಟಿಸಿ ಬಸ್ ‌ಗೆ ಒಂದೇ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ವಿಸ್ತರಿಸಲು ಸಂಸ್ಥೆ ಮುಂದಾಗಿದೆ.

ಹೊಸ ವ್ಯವಸ್ಥೆಯಡಿ ಪ್ರಯಾಣಿಕರು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮಾತ್ರವಲ್ಲದೆ ನನ್ನೇ ಕಾರ್ಡ್ ಬಳಸಿ ಕೂಡ ಬಿಎಂಟಿಸಿ ಬಸ್ಗಳಲ್ಲಿ ಪ್ರಯಾಣಿಸಲು ಸಾಧ್ಯವಾಗಲಿದೆ. ಈ ಮೂಲಕ ಪ್ರಯಾಣಿಕರು ಪ್ರತ್ಯೇಕ ಟಿಕೆಟ್ ಅಥವಾ ನಗದು ಹುಡುಕುವ ತೊಂದರೆಯಿಂದ ಮುಕ್ತರಾಗಲಿದ್ದಾರೆ.

ಈ ಯೋಜನೆಯ ಭಾಗವಾಗಿ ಬಿಎಂಟಿಸಿ ಸುಮಾರು 10 ಸಾವಿರ ಅತ್ಯಾಧುನಿಕ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು (ETM) ಅಳವಡಿಸಲು ಸಿದ್ಧತೆ ನಡೆಸಿದೆ. ಹೊಸ ಯಂತ್ರಗಳಲ್ಲಿ National Common Mobility Card ಬಳಕೆಗೆ ಅವಕಾಶ ನೀಡಲಾಗಿದ್ದು, ಇದರ ಮೂಲಕ ಮೆಟ್ರೋ ಮತ್ತು ಬಸ್ ಎರಡರಲ್ಲೂ ಒಂದೇ ಕಾರ್ಡ್ ಬಳಸಿ ಸಂಚಾರ ಮಾಡಲು ಸಾಧ್ಯವಾಗಲಿದೆ.

ಈ ಯೋಜನೆಗೆ ಸುಮಾರು 40 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಮುಂಬೈ ಮೂಲದ Chalo ಸಂಸ್ಥೆಗೆ ಟೆಂಡರ್ ನೀಡಲಾಗಿದೆ. ಐದು ವರ್ಷಗಳ ಗುತ್ತಿಗೆ ಆಧಾರದಲ್ಲಿ ಸುಮಾರು 11 ಸಾವಿರ ಇಟಿಎಂ ಯಂತ್ರಗಳನ್ನು ಪೂರೈಕೆ ಮಾಡಲು ಕಂಪನಿ ಆಯ್ಕೆಯಾಗಿದೆ.

ಈ ತಿಂಗಳೊಳಗೆ ಹೆಚ್ಚಿನ ಬಿಎಂಟಿಸಿ ಬಸ್ಗಳಲ್ಲಿ ಹೊಸ ಯಂತ್ರಗಳನ್ನು ಅಳವಡಿಸುವ ಸಾಧ್ಯತೆ ಇದೆ. ಈ ಯಂತ್ರಗಳ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಫೋನ್ಪೇ, ಗೂಗಲ್ ಪೇ ಮತ್ತು ಪೇಟಿಯಂ ಮೂಲಕ ಪ್ರಯಾಣಿಕರು ಸುಲಭವಾಗಿ ಹಣ ಪಾವತಿಸಿ ಟಿಕೆಟ್ ಪಡೆಯಬಹುದು.

ಇದಲ್ಲದೆ ಯಂತ್ರಗಳಲ್ಲಿ ಡೈನಾಮಿಕ್ ಕ್ಯೂಆರ್ ಕೋಡ್ ವ್ಯವಸ್ಥೆ ಅಳವಡಿಸಲಾಗಿದ್ದು, ಇದರಿಂದ ಟಿಕೆಟ್ ವಂಚನೆ ಅಥವಾ ಅಕ್ರಮಗಳಿಗೆ ಅವಕಾಶ ಕಡಿಮೆಯಾಗಲಿದೆ. ಪ್ರಯಾಣದ ದೂರ ಮತ್ತು ಟಿಕೆಟ್ ದರ ಸೇರಿದಂತೆ ಎಲ್ಲಾ ಮಾಹಿತಿ ಯಂತ್ರದಲ್ಲೇ ದಾಖಲಾಗುವುದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಲಿದೆ.

ಹೆಚ್ಚಿನ ಸುದ್ದಿ

Change Language »
error: Content is protected !!