Friday, December 5, 2025
Homeಟಾಪ್ ನ್ಯೂಸ್BMRCL : ಮತ್ತೆ ಮೆಟ್ರೋದತ್ತ ಮರಳಿದ ಪ್ರಯಾಣಿಕರು

BMRCL : ಮತ್ತೆ ಮೆಟ್ರೋದತ್ತ ಮರಳಿದ ಪ್ರಯಾಣಿಕರು

ಬೆಂಗಳೂರು : ನಮ್ಮ ಮೆಟ್ರೋ ಟಿಕೆಟ್ ರೇಟ್ ಹೆಚ್ಚಾದಾಗಿನಿಂದ ಪ್ರಯಾಣಿಕರ ಸಂಖ್ಯೆ ತುಸು ಕಡಿಮೆಯಾಗಿತ್ತು. ಜನ ಮೆಟ್ರೋ ಪ್ರಯಾಣದಿಂದ ಕೊಂಚ ದೂರವೇ ಉಳಿದಿದ್ದರು. ಆದ್ರೆ ಇದೀಗ ಮತ್ತೆ ಜನರು ಮುಖಮಾಡಿದ್ದಾರೆ.

ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳಕ್ಕೆ ಮುನ್ನ ನಿತ್ಯ ಸರಾಸರಿ 8 ಲಕ್ಷಕ್ಕೂ ಅಧಿಕ ಜನರು ಪ್ರಯಾಣಿಸುತ್ತಿದ್ದರು. ಆನಂತರ ಪ್ರಯಾಣಿಕರ ಸಂಖ್ಯೆ 7.24 ಲಕ್ಷಕ್ಕೆ ಇಳಿಕೆಯಾಗಿತ್ತು. ಏಪ್ರಿಲ್‌ನಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದ್ದು, ಕಳೆದ 15 ದಿನಗಳಲ್ಲಿ ದೈನಂದಿನ ಪ್ರಯಾಣಿಕರ ಸಂಖ್ಯೆ 7.70 ಲಕ್ಷಕ್ಕೆ ತಲುಪಿದೆ. ಬೆಂಗಳೂರು ಟ್ರಾಫಿಕ್ ಗೆ ಹೈರಾಣಾಗಿರುವ ಜನರು ಮತ್ತೆ ಮೆಟ್ರೋ ಕಡೆ ವಾಲಿದ್ದಾರೆ.

ಏಪ್ರಿಲ್‌ 17 ರಂದು ಒಂದೇ ದಿನ 9.08 ಲಕ್ಷಕ್ಕೂ ಹೆಚ್ಚು ಮಂದಿ ಸಂಚರಿಸಿದ್ದಾರೆ. ಮೆಟ್ರೋ ಇತಿಹಾಸದಲ್ಲೇ ಇದು ಹೊಸ ದಾಖಲೆಯಾಗಿದೆ.ಅತಿಯಾದ ಬಿಸಿಲು, ಆಗಾಗ್ಗೆ ಬೀಳುವ ಮಳೆ, ಶಾಲಾ ಕಾಲೇಜುಗಳಿಗೆ ರಜೆ, ಪೆಟ್ರೊಲ್‌-ಡೀಸೆಲ್‌ ದರ ಹೆಚ್ಚಳ ಕಾರಣದಿಂದ ಮೆಟ್ರೋ ಪ್ರಯಾಣ ಸುಲಲಿತ ಎಂದು ಜನರ ಅಭಿಪ್ರಾಯವಾಗಿದೆ.

ಹೆಚ್ಚಿನ ಸುದ್ದಿ

Change Language »
While viewing the website, tap in the menu bar. Scroll down the list of options, then tap Add to Home Screen.
Use Safari for a better experience.
error: Content is protected !!