Saturday, January 25, 2025
Homeಟಾಪ್ ನ್ಯೂಸ್ಸ್ವಾಮೀಜಿಯ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್.!

ಸ್ವಾಮೀಜಿಯ ಬೆತ್ತಲೆ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್.!

ಚಿಕಿತ್ಸೆಗೆಂದು ಬೆತ್ತಲಾಗಿದ್ದೇ ಸ್ವಾಮೀಜಯೊಬ್ಬರಿಗೆ ಕಂಟಕವಾಗಿದೆ. ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಬೆತ್ತಲಾಗಿದ್ದ ವಿಡಿಯೊ ಚಿತ್ರೀಕರಿಸಿರುವ ದುಷ್ಕರ್ಮಿಗಳ ತಂಡ ಸ್ವಾಮೀಜಿ ಬಳಿ ಭಾರೀ ದೊಡ್ಡ ಮೊತ್ತದ ದುಡ್ಡಿಗೆ ಬೇಡಿಕೆ ಇಟ್ಟಿದೆ.

ರಾಮನಗರದ ಕೃಪಾನಂದನಾಥ ಸ್ವಾಮೀಜಿ ಬ್ಲ್ಯಾಕ್‌ಮೇಲ್‌ಗೆ ಒಳಗಾದ ಸ್ವಾಮೀಜಿ. 4 ಕೋಟಿ ರೂ. ನೀಡುವಂತೆ ಅವರಲ್ಲಿ ಬೇಡಿಕೆ ಇಟ್ಟ ಇಬ್ಬರು ಆರೋಪಿಗಳನ್ನು ರಾಮನಗರ ಗ್ರಾಮಾಂತರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ರಾಮನಗರದ ಅರ್ಚಕರಹಳ್ಳಿಯ ಆದಿಚುಂಚನಗಿರಿ ಶಾಖಾ ಮಠದ ಕಿರಿಯ ಶ್ರೀಗಳಾದ ಕೃಪಾನಂದನಾಥ ಸ್ವಾಮೀಜಿ ಅವರ ವಿಡಿಯೊ ಚಿತ್ರೀಕರಣಗೊಳಿಸಿದ ಇಬ್ಬರು ನಿರಂತರವಾಗಿ ಹಣಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈಚೆಗೆ ನನಗೆ ಚರ್ಮದ ಅಲರ್ಜಿ ಆಗಿತ್ತು. ವೈದ್ಯರ ಸಲಹೆ ಮೇರೆಗೆ ದಿನ ಬೆಳಿಗ್ಗೆ ಹಾಗೂ ಸಂಜೆ ಮೈಗೆ ಔಷಧಿ ಹಚ್ಚಿಕೊಂಡು ಮಲಗುತ್ತಿದ್ದೆ. ಈ ವಿಚಾರ ತಿಳಿದವರು ನನ್ನ ಕೊಠಡಿಯಲ್ಲಿ ನಾನು ಬೆತ್ತಲಾಗಿರುವ ಚಿತ್ರೀಕರಣ ಮಾಡಿದ್ದಾರೆ. ಮಾರ್ಚ್ 20ರಂದು ಸಂಜೆ ರವಿಕುಮಾರ್ ಎಂಬ ವ್ಯಕ್ತಿ ಮಠದಲ್ಲಿನ ನನ್ನ ಕೊಠಡಿಗೆ ಬಂದು ನನ್ನ ವಿಡಿಯೊ ತೋರಿಸಿ 4 ಕೋಟಿಗೆ ಬೇಡಿಕೆ ಇಟ್ಟರು. ಕೇಳಿದಷ್ಟು ಹಣ ಕೊಡದೆ ಹೋದರೆ 4 ಲಕ್ಷ ಕೊಟ್ಟು ಇದೇ ವಿಡಿಯೊಗಳನ್ನು ಬೇಕಾದಂತೆ ಎಡಿಟ್ ಮಾಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಸ್ವಾಮಿ ಆರೋಪಿಸಿದ್ದಾರೆ.

ಹೆಚ್ಚಿನ ಸುದ್ದಿ

error: Content is protected !!