ಬೆಂಗಳೂರು: ಚುನಾವಣೆ ಹೊತ್ತಲ್ಲಿ ರಾಜಕೀಯ ಪಕ್ಷಗಳು ರಾಮನವಮಿಯನ್ನೂ ತಮ್ಮ ರಾಜಕೀಯ ವಾಗ್ಯುದ್ಧದಲ್ಲಿ ಎಳೆದು ತಂದಿವೆ. ಭಾರತೀಯ ಜನತಾ ಪಾರ್ಟಿ ಟ್ವಿಟರ್ ಮುಖಾಂತರ ಸಿದ್ದರಾಮಯ್ಯರನ್ನು ಟೀಕಿಸಿದ್ರೆ. ಅದಕ್ಕೆ ಸಿದ್ದರಾಮಯ್ಯ ಪ್ರತಿಟೀಕೆ ಮಾಡಿದ್ದಾರೆ.
ಇವತ್ತಿನ ಟ್ವೀಟ್ ವಾರ್‌ಗೆ ಕಾರಣವಾಗಿದ್ದು ಶ್ರೀರಾಮನವಮಿ ಪೋಸ್ಟ್‌ಗಳು. ಇಂದು ಬೆಳಿಗ್ಗೆ ಸಿದ್ದರಾಮಯ್ಯ ರಾಮನವಮಿ ಶುಭಾಷಯ ಎಂದು ಟ್ವೀಟ್ ಮಾಡಿದ್ರು. ಇದಕ್ಕೆ ಪ್ರತಿಟ್ವೀಟ್ ಮಾಡಿದ ಬಿಜೆಪಿ ಶ್ರೀರಾಮಚಂದ್ರನ ಅಸ್ತಿತ್ವವನ್ನು ಪ್ರಶ್ನಿಸುವ, ರಾಮರಾಜ್ಯವನ್ನು ಟೀಕಿಸುವ ಸಿದ್ದರಾಮಯ್ಯ ಚುನಾವಣೆ ಹೊತ್ತಲ್ಲಿ ರಾಮನಾಮ ಹಾಡುತ್ತಿದ್ದಾರೆ ಎಂದಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ನನ್ನ ರಾಮ ಅತಃಕರಣಸ್ವರೂಪಿ, ನಿಮಗೆ ರಾಮ ಚುನಾವಣೆಯ ಸರಕು ಎಂದಿ ತಿರುಗೇಟು ಕೊಟ್ಟಿದ್ದಾರೆ